alex Certify 5, 8ನೇ ತರಗತಿಗೆ ಈ ವರ್ಷದಿಂದಲೇ ಹೊಸ ಪರೀಕ್ಷೆ: ಕಲಿಕಾ ಗುಣಮಟ್ಟ ಪರಿಶೀಲನೆ –ಎಲ್ಲರೂ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5, 8ನೇ ತರಗತಿಗೆ ಈ ವರ್ಷದಿಂದಲೇ ಹೊಸ ಪರೀಕ್ಷೆ: ಕಲಿಕಾ ಗುಣಮಟ್ಟ ಪರಿಶೀಲನೆ –ಎಲ್ಲರೂ ಪಾಸ್

ಬೆಂಗಳೂರು: ವಿದ್ಯಾರ್ಥಿಗಳ ಕಲಿಕಾ ಮಟ್ಟ ಮೌಲ್ಯಮಾಪನ ಮಾಡುವ ದೃಷ್ಟಿಯಿಂದ ಈ ವರ್ಷ ಐದು ಮತ್ತು ಎಂಟನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10ನೇ ತರಗತಿಯಲ್ಲಿ ಮಕ್ಕಳು ಪಬ್ಲಿಕ್ ಪರೀಕ್ಷೆ ಎದುರಿಸುತ್ತಾರೆ. ವಿದ್ಯಾರ್ಥಿಗಳು ಎಸೆಸೆಲ್ಸಿ ಹಂತಕ್ಕೆ ತಲುಪುವ ಮೊದಲು ಕಲಿಕಾ ಮಟ್ಟ ಮೌಲ್ಯಮಾಪನ ಮಾಡುವ ದೃಷ್ಟಿಯಿಂದ ಐದು ಮತ್ತು ಎಂಟನೇ ತರಗತಿ ಹಂತದಲ್ಲಿ ಕಲಿಕಾ ಗುಣಮಟ್ಟ ಮೌಲ್ಯಮಾಪನ ಟೆಸ್ಟ್ ನಡೆಸಲಾಗುವುದು. ಯಾರನ್ನು ಫೇಲ್ ಮಾಡುವುದಿಲ್ಲ. ಈ ಪರೀಕ್ಷೆಗಳು ಪಬ್ಲಿಕ್ ಪರೀಕ್ಷೆಗಳಾಗಿರುವುದಿಲ್ಲ. ಸಾಮಾನ್ಯ ಪರೀಕ್ಷೆಯಾಗಿರುತ್ತದೆ ಎಂದರು.

ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡುಬಂದಲ್ಲಿ ಅಂಥವರಿಗೆ ಕೆಲ ತಿಂಗಳು ಮತ್ತೆ ತರಗತಿ ನಡೆಸಿ ಪರೀಕ್ಷೆ ಬರೆಸಲಾಗುವುದು. ಅವರ ಕಲಿಕಾ ಮಟ್ಟವನ್ನು ಸುಧಾರಿಸಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...