alex Certify ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ: PUBG New State ಆಟಕ್ಕೆ ಉತ್ತಮ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ: PUBG New State ಆಟಕ್ಕೆ ಉತ್ತಮ ಪ್ರತಿಕ್ರಿಯೆ

ಭಾರತದಲ್ಲಿ ಪಬ್ಜಿ ಆಟ ನಿಷೇಧಿಸಿದ ನಂತ್ರ ಲಕ್ಷಾಂತರ ಮಂದಿ ನಿರಾಶೆಗೊಂಡಿದ್ದರು. ಆದ್ರೆ ಶೀಘ್ರದಲ್ಲೇ ಒಳ್ಳೆ ಸುದ್ದಿ ಸಿಗಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUBG New Stateನ ಪೂರ್ವ ನೋಂದಣಿ ಪ್ರಾರಂಭವಾಗಿದೆ. ಇದರ ಜನಪ್ರಿಯತೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಈ ಆಟ ಶುರುವಾಗುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ.

ಕಳೆದ ತಿಂಗಳು ಫೆಬ್ರವರಿ 25 ರಂದು ಕ್ರಾಫ್ಟನ್ ಕಂಪನಿಯು ಪೂರ್ವ ನೋಂದಣಿಗಾಗಿ ಪಬ್ಜಿ ನ್ಯೂ ಸ್ಟೇಟ್ ಆಟವನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ನಲ್ಲಿ ನೀಡಿತ್ತು. ಕೇವಲ 7 ದಿನಗಳಲ್ಲಿ ಈ ವಿಡಿಯೋ ಗೇಮ್‌ಗೆ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ವಾರದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ನ್ಯೂ ಸ್ಟೇಟ್ ಆಟದ ಜನಪ್ರಿಯತೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಇದರ ಹಿಂದಿನ ಒಂದು ಕಾರಣವೆಂದರೆ ಇದನ್ನು ಪಬ್ಜಿ ಆಟದಂತೆ ವಿನ್ಯಾಸಗೊಳಿಸಲಾಗಿದೆ. ಕೆಲವು ಜನರು ಇದಕ್ಕೆ ಪಬ್ಜಿ ಮೊಬೈಲ್ 2 ಎಂಬ ಹೆಸರನ್ನು ನೀಡುತ್ತಿದ್ದಾರೆ. ಪಬ್ಜಿ ಪ್ರಿಯರು ಈ ಆಟವನ್ನು ತುಂಬಾ ಇಷ್ಟಪಡುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...