alex Certify EPFO ನ ಈ ಸ್ಕೀಂ ನಿಂದ ಸಿಗುತ್ತೆ ಏಳು ಲಕ್ಷ ರೂಪಾಯಿಯಷ್ಟು ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

EPFO ನ ಈ ಸ್ಕೀಂ ನಿಂದ ಸಿಗುತ್ತೆ ಏಳು ಲಕ್ಷ ರೂಪಾಯಿಯಷ್ಟು ಪ್ರಯೋಜನ

ಹೂಡಿಕೆ ಮೇಲೆ ಒಳ್ಳೆಯ ಬಡ್ಡಿಯೊಂದಿಗೆ ಗ್ಯಾರಂಟಿ ರಿಟರ್ನ್ಸ್ ಸಿಗಬಲ್ಲ ಮೂಲಗಳಲ್ಲಿ ಒಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ). ಯಾವುದೇ ಪ್ರೀಮಿಯಂ ಇಲ್ಲದೇ ವಿಮಾ ಯೋಜನೆ ಆಯ್ದುಕೊಳ್ಳಲು ಇಪಿಎಫ್‌ಓ ತನ್ನ ಚಂದಾದಾರರಿಗೆ ಆಯ್ಕೆ ನೀಡುತ್ತದೆ.

ಕಾರ್ಮಿಕರ ಠೇವಣಿ ಸಂಬಂಧಿತ ವಿಮೆ ಅಥವಾ ಇಡಿಎಲ್‌ಐ ಸ್ಕೀಂ, 1976ರ ಅಡಿ ಈ ಯೋಜನೆಯನ್ನು ಕೊಡಮಾಡಲಾಗಿದೆ. ಇದರಿಂದ ಫಲಾನುಭವಿಗಳಿಗೆ ಏಳು ಲಕ್ಷ ರೂಪಾಯಿಗಳವರೆಗೂ ಪ್ರಯೋಜನಗಳು ಸಿಗಲಿವೆ.

ಈ ಯೋಜನೆಯಡಿ: ಖಾತಾದಾರರು ನಾಮಿನಿ ಮಾಡಿರುವವರು ಅಥವಾ ಕುಟುಂಬಿಕರಿಗೆ, ಖಾತಾದಾರರ ಅಕಾಲಿಕ ಮರಣವಾದಲ್ಲಿ ಏಳು ಲಕ್ಷ ರೂಪಾಯಿಗಳವರೆಗೂ ಲಾಭಗಳು ಸಿಗಲಿವೆ. ವಿಮಾ ಮೊತ್ತವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಏಳು ಲಕ್ಷ ರೂಪಾಯಿಗೆ ಏರಿಸಲಾಗಿದೆ.

ಟ್ರೋಲ್‌ಗಳ ಕುರಿತು ಮಾರ್ಮಿಕವಾಗಿ ನುಡಿದ ಸಮಂತಾ

ಖಾತ್ರಿಯಾದ ಪ್ರಯೋಜನಗಳು

ಇಡಿಎಲ್‌ಐ ಖಾತಾದಾರರಿಗೆ ಖಾತ್ರಿಯಾಗುವ ಕನಿಷ್ಠ ಮೊತ್ತ 2.5 ಲಕ್ಷ ರೂಪಾಯಿಗಳಾಗಿದ್ದು, ಇದಕ್ಕಾಗಿ ಖಾತಾದಾರರು ತಮ್ಮ ಮರಣಕ್ಕೂ ಮುನ್ನ ಕನಿಷ್ಠ 12 ತಿಂಗಳ ಮಟ್ಟಿಗೆ ನಿರಂತರವಾಗಿ ಪಾವತಿ ಮಾಡುತ್ತಿರಬೇಕು.

ಇಪಿಎಫ್‌ಓ ಸದಸ್ಯರು ಪ್ರತ್ಯೇಕವಾಗಿ ಇಡಿಎಲ್‌ಐ ಯೋಜನೆಗೆ ಸಹಿ ಮಾಡಬೇಕಾದ ಅಗತ್ಯವಿಲ್ಲ. ಒಮ್ಮೆ ಇಪಿಎಫ್‌ಓ ಸದಸ್ಯರಾದಲ್ಲಿ ಈ ಯೋಜನೆಗೆ ಅವರು ತನ್ನಿಂತಾನೇ ಅರ್ಹರಾಗುತ್ತಾರೆ.

ಪಾವತಿಯ ಸರಳೀಕರಣಕ್ಕೆ ಇಡಿಎಲ್‌ಐ ಸ್ಕೀಂ ಅನ್ನು ನಾಮಿನಿಯ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್‌ ಮಾಡಲಾಗಿರುತ್ತದೆ. ಖಾತಾದಾರರ ಮರಣದ ಬಳಿಕ, ಹಣವು ನೇರವಾಗಿ ನಾಮಿನಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಖಾತಾದಾರರ ಅಧಿಕೃತ ವಾರಸುದಾರರಾಗಲು ಬಯಸುವವರು, ಇಪಿಎಫ್‌ಓನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಫಾರಂ 15ಅನ್ನು ಭರ್ತಿ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...