ಪ್ರಯಾಗ್ ರಾಜ್ ನಲ್ಲಿ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಹಮ್ಮದ್ ಜಾವೇದ್ ರ ಪುತ್ರಿ ಹೋರಾಟಗಾರ್ತಿ ಅಫ್ರೀನ್ ಫಾತೀಮಾರನ್ನು ಬೆಂಬಲಿಸಿ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಜೂನ್ 11 ರಂದು ಫಾತೀಮಾ ಸಾಮಾಜಿಕ ಮಾಧ್ಯಮದ ಮೂಲಕ ತನ್ನ ತಂದೆಯ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು. ಆದರೆ, ಪ್ರಯಾಗ್ ರಾಜ್ ನಲ್ಲಿನ ಹಿಂಸಾಚಾರದ ಹಿಂದೆ ಜಾವೇದ್ ಕೈವಾಡ ಇದೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ.
BIG NEWS: ವಿದೇಶದಲ್ಲಿ ಮನ್ಮಿತ್ ರೈ ಭರ್ಜರಿ ಪಾರ್ಟಿ; ಯುವತಿಯರ ಮೇಲೆ ಕಂತೆ ಕಂತೆ ಹಣ ಎಸೆದು ಮೋಜು ಮಸ್ತಿ
ಭಾನುವಾರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬುಲ್ಡೋಜರ್ ಗಳನ್ನು ಬಳಸಿ ಜಾವೇದ್ ಮನೆಯನ್ನು ನೆಲಸಮ ಮಾಡಲಾಗಿತ್ತು. ಇದೀಗ ಫಾತೀಮಾ ಮತ್ತು ಅವರ ತಂದೆಯನ್ನು ಬೆಂಬಲಿಸಿ ಜೆ.ಎನ್.ಯು. ನ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಿಳಿದಿವೆ.