alex Certify ಸರ್ಕಾರಿ ಜಮೀನು ರಕ್ಷಣೆಗೆ ಮಹತ್ವದ ಕ್ರಮ: ಪ್ರತಿ ತಿಂಗಳು ಒತ್ತುವರಿ ತೆರವು ಅಭಿಯಾನ, ಬೀಟ್ ವ್ಯವಸ್ಥೆ ಜಾರಿಗೆ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಜಮೀನು ರಕ್ಷಣೆಗೆ ಮಹತ್ವದ ಕ್ರಮ: ಪ್ರತಿ ತಿಂಗಳು ಒತ್ತುವರಿ ತೆರವು ಅಭಿಯಾನ, ಬೀಟ್ ವ್ಯವಸ್ಥೆ ಜಾರಿಗೆ ತೀರ್ಮಾನ

ಬೆಂಗಳೂರು: ಒತ್ತುವರಿ ತೆರವು ಮಾಡಿದ ಸರ್ಕಾರಿ ಜಮೀನು ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಕಂದಾಯ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ಬೀಟ್ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರದ ವೇಳೆ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವರು ಉತ್ತರ ನೀಡಿ, ಒತ್ತುವರಿದಾರರಿಂದ ಮರು ವಶಕ್ಕೆ ಪಡೆದ ಸರ್ಕಾರಿ ಜಮೀನುಗಳ ಮೇಲೆ ನಿಗಾ ವಹಿಸಲು ಕಂದಾಯ ಇಲಾಖೆ ಅಧಿಕಾರಗಳನ್ನೇ ಬಳಸಿಕೊಂಡು ಬೀಟ್ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದರು.

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೆ ಕಬಳಿಕೆಯಾಗುವುದನ್ನು ತಡೆಯಲು ಪೊಲೀಸರ ಬೀಟ್ ಮಾದರಿಯಲ್ಲಿ ಕಂದಾಯ ಅಧಿಕಾರಿಗಳನ್ನು ಬಳಸಿಕೊಂಡು ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಸರ್ಕಾರಿ ಭೂಮಿ ಒತ್ತುವರಿ ಎಲ್ಲಾ ಸರ್ಕಾರಗಳ ಆಡಳಿತಾವಧಿಯಲ್ಲಿ ನಡೆದಿದೆ. ಒತ್ತುವರಿ ತೆರವು ಸರ್ಕಾರದ ಇಚ್ಛಾಶಕ್ತಿಯ ಮೇಲೆ ನಡೆಯುತ್ತಿತ್ತು. ಇರುವ ಕಾನೂನುಗಳನ್ನೇ ಬಳಸಿಕೊಂಡು ವ್ಯವಸ್ಥಿತವಾಗಿ ಒತ್ತುವರಿ ತೆರವುಗೊಳಿಸಲಾಗುವುದು. ಪ್ರತಿ ತಿಂಗಳು ಒತ್ತುವರಿ ತೆರವು ಅಭಿಯಾನ ನಡೆಸಲಿದ್ದು, ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿ ಒತ್ತುವವರಿ ಆದ ಸರ್ಕಾರಿ ಜಮೀನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...