alex Certify ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿನಿಯರ ಬಳಸಿ ವೇಶ್ಯಾವಾಟಿಕೆ: ಮತ್ತೆ 7 ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿನಿಯರ ಬಳಸಿ ವೇಶ್ಯಾವಾಟಿಕೆ: ಮತ್ತೆ 7 ಮಂದಿ ಅರೆಸ್ಟ್

ಮಂಗಳೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಮತ್ತೆ 7 ಮಂದಿಯನ್ನು ಬಂಧಿಸಿದ್ದಾರೆ.

ಫೆಬ್ರವರಿ 2 ರಂದು ಪ್ರಕರಣ ಬಯಲಾದ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಈಗ ಗ್ರಾಹಕರಾಗಿ ಬಂದು ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಮತ್ತು ದಂಧೆಯಲ್ಲಿ ತೊಡಗಿದ್ದ ಉಳಿದವರನ್ನು ಬಂಧಿಸಲಾಗಿದೆ.

ಪ್ರಕರಣ ಬಯಲಾದ ಸಂದರ್ಭದಲ್ಲಿ ಉಪ್ಪಳದ ಅಬೂಬಕರ್ ಸಿದ್ದಿಕ್(42), ನಂದಿಗುಡ್ಡೆಯ ಶಮಿನಾ(41),  ಅಡ್ಯಾರ್ ಪದವುನ ಐಸಮ್ಮ(56) ಅವರನ್ನು ಬಂಧಿಸಲಾಗಿತ್ತು. ಈಗ ಗ್ರಾಹಕರಾಗಿ ಬಂದು ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಮೂಡಬಿದರೆ ಹೊಸಬೆಟ್ಟಿನ ಸಂದೀಪ್(33), ಕೈಕಂಬದ ಸಿಪ್ರಿಯಾನ್ ಅಂದ್ರಾದೆ(40), ಉದ್ಯಾವರದ ಮಂಜೇಶ್ವರದ ಮಹಮ್ಮದ್ ಶರೀಫ್(46), ವೇಶ್ಯಾವಾಟಿಕೆ ಜಾಲಕ್ಕೆ ಸಹಕಾರ ನೀಡಿದ ತಲಪಾಡಿಯ ರಹಮತ್(48), ಕಣ್ಣೂರಿನ ಸನಾ(24) ಮತ್ತು ಬಂಡ್ವಾಳ ನರಿಂಗಾನದ ಹನೀಫ್(43) ಅವರನ್ನು ಬಂಧಿಸಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫಸ್ಟ್ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯನ್ನು ತಂಡದ ಸದಸ್ಯೆ ಪರಿಚಯಿಸಿಕೊಂಡಿದ್ದು, ಗಿರಾಕಿಯೊಂದಿಗೆ ಹೋಗಲು ತಿಳಿಸಿದ್ದಾಳೆ. ಇದಕ್ಕೆ ಅಪ್ರಾಪ್ತೆ ನಿರಾಕರಿಸಿದಾಗ ಗಿರಾಕಿಯೊಂದಿಗೆ ಇರುವ ಸಿಸಿಟಿವಿ ಫೂಟೇಜ್ ಅದರ ವಿಡಿಯೋವನ್ನು ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಎರಡು ತಿಂಗಳಲ್ಲಿ ಆರು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ಕೇಂದ್ರದಲ್ಲಿ ಇರಿಸಲಾಗಿದೆ.

ವಿದ್ಯಾರ್ಥಿನಿ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡ ಬಗ್ಗೆ ಕಾಲೇಜಿನ ಮುಖ್ಯಸ್ಥರಿಗೆ ಮಾಹಿತಿ ತಿಳಿದ ನಂತರ ಈ ಪ್ರಕರಣ ಬಹಿರಂಗವಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಪ್ರಕರಣದಲ್ಲಿ ಇದುವರೆಗೆ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...