
ನಿನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ಪ್ರೊಫೈಲ್ಗಳಲ್ಲಿ ಜೋನಾಸ್ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ ಸ್ನೇಹಿತೆಯೊಬ್ಬರು ವಿಚ್ಛೇದನದ ಸುದ್ದಿ ಸತ್ಯಕ್ಕೆ ದೂರವಾಗಿದೆ. ತಮ್ಮ ಮುಂದಿನ ಯೋಜನೆಯೊಂದಿಗೆ ಕೇವಲ ಪ್ರಿಯಾಂಕಾ ಹೆಸರನ್ನು ಮಾತ್ರ ಬಳಸುವ ಬಗ್ಗೆ ಯೋಚಿಸಿದ್ದಾರೆ. ಹೀಗಾಗಿ ಡಿವೋರ್ಸ್ ಸುದ್ದಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ತಮ್ಮ ಕೊನೆಯ ಹೆಸರನ್ನು ಅಳಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ – ನಿಕ್ ಡಿವೋರ್ಸ್ ವಿಚ್ಛೇದನದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.