ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಅನೇಕ ಜನಪ್ರಿಯ ಅಪ್ಲಿಕೇಶನ್ಗಳು ಮಿಲಿಯನ್ಗಟ್ಟಲೇ ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡಿವೆ. ಭದ್ರತಾ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್ನಲ್ಲಿ ಬರೋಬ್ಬರಿ 140 ಮಿಲಿಯನ್ ಬಾರಿ ಡೌನ್ಲೋಡ್ ಮಾಡಲಾದ ಡಜನ್ಗಟ್ಟಲೇ ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ಪತ್ತೆ ಮಾಡಿದ್ದು, ಈ ಅಪ್ಲಿಕೇಶನ್ಗಳು ಗ್ರಾಹಕರ ಮಾಹಿತಿ ಸೋರಿಕೆ ಮಾಡಿವೆ ಎಂದು ಹೇಳಿತ್ತು. ಇದೀಗ ಹೊಸ ಸಮೀಕ್ಷೆಯಲ್ಲಿ ಇಂತಹ ಮತ್ತೆ 14 ಅಪ್ಲಿಕೇಶನ್ಗಳು ಪತ್ತೆಯಾಗಿವೆ. ಈ ಅಪ್ಲಿಕೇಶನ್ಗಳನ್ನು 14.25 ಬಾರಿ ಡೌನ್ಲೋಡ್ ಮಾಡಲಾಗಿದೆ.
ಈ ಆಂಡ್ರಾಯ್ಡ್ ಅಪ್ಲಿಕೇಶನ್ಗಳು ಗ್ರಾಹಕರ ಅತ್ಯಂತ ಖಾಸಗಿ ಮಾಹಿತಿಗಳು ಅಂದರೆ ಇಮೇಲ್, ಬಳಕೆದಾರರ ಹೆಸರು, ಬ್ಯಾಂಕಿಂಗ್ ಮಾಹಿತಿ ಹೀಗೆ ಸಾಕಷ್ಟು ವಿಚಾರಗಳನ್ನು ಲೀಕ್ ಮಾಡ್ತಿವೆ.
ಸೈಬರ್ ನ್ಯೂಸ್ ನೀಡಿರುವ ಮಾಹಿತಿಯ ಪ್ರಕಾರ, ಈ ಜನಪ್ರಿಯ 14 ಅಪ್ಲಿಕೇಶನ್ಗಳು ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡುವುದರ ಜೊತೆಗೆ ಬಳಕೆದಾರರ ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುತ್ತಿವೆ. ಇವುಗಳಲ್ಲಿ ಯುನಿವರ್ಸಲ್ ಟಿವಿ ರಿಮೋಟ್ ಕಂಟ್ರೋಲ್ ಕೂಡ ಇದ್ದು ಈ ಅಪ್ಲಿಕೇಶನ್ 100 ಮಿಲಿಯನ್ ಆಂಡ್ರಾಯ್ಡ್ ಬಳಕೆದಾರರ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗಿದೆ.
ಇನ್ನೊಂದು ಪ್ರಚಲಿತ ಅಪ್ಲಿಕೇಶನ್ ಅಂದರೆ ಫೈಂಡ್ ಮೈ ಕಿಡ್ಸ್ : ಇದು ಮಗುವಿಗೆ ಜಿಪಿಎಸ್ ವಾಚ್ ಅಳವಡಿಸಿ ಮೊಬೈಲ್ನಲ್ಲಿ ಟ್ರ್ಯಾಕರ್ನ್ನು ಇಡಲಾಗುತ್ತದೆ. ಇದನ್ನು ಕೂಡ ಗೂಗಲ್ ಪ್ಲೇ ಸ್ಟೋರ್ ಮೂಲಕ 10 ಮಿಲಿಯನ್ ಬಾರಿ ಡೌನ್ ಲೋಡ್ ಮಾಡಲಾಗಿದೆ.
ಹೈಬ್ರಿಡ್ ವಾರಿಯರ್: ಡಂಜನ್ ಆಫ್ ದಿ ಓವರ್‌ಲಾರ್ಡ್ ಮತ್ತು ರಿಮೋಟ್ ಫಾರ್ ರೋಕು: ಕೋಡ್‌ಮ್ಯಾಟಿಕ್ಸ್ – ಸೈಬರ್ ನ್ಯೂಸ್ ವರದಿ ಮಾಡಿದ ಇತರ ಅಪ್ಲಿಕೇಶನ್‌ಗಳಾಗಿವೆ. ಈ ಎರಡೂ ಅಪ್ಲಿಕೇಶನ್ಗಳನ್ನು ಎರಡು ಮಿಲಿಯನ್ ಬಾರಿ ಡೌನ್ಲೋಡ್ ಮಾಡಲಾಗಿದೆ.