ಕೋವಿಡ್ ಸಂಬಂಧ ದೇಶವನ್ನೇ ಮೊದಲ ಬಾರಿಗೆ ಲಾಕ್ಡೌನ್ ಮಾಡಿದ್ದ ವೇಳೆ ಮನೆಯಿಂದ ತಪ್ಪಿಸಿಕೊಂಡಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬರು 16 ತಿಂಗಳ ಬಳಿಕ ತಮ್ಮ ಕುಟುಂಬ ಕೂಡಿಕೊಂಡಿದ್ದಾರೆ.
ಇಲ್ಲಿನ ಸಿಂಡೇಗಾ ಜಿಲ್ಲೆಯ ಮಾರ್ಖಸ್ ಹೆಸರಿನ ಈ ವ್ಯಕ್ತಿ ಫೆಬ್ರವರಿ 2020ರಲ್ಲಿ ಗೋವಾಗೆ ಕೆಲಸಕ್ಕೆಂದು ತೆರಳಿದ್ದರು. ಮಾರ್ಚ್ 2020ರಲ್ಲಿ ಕೊರೋನಾ ವೈರಸ್ ಲಾಕ್ಡೌನ್ ಕಾರಣದಿಂದಾಗಿ ಮಿಕ್ಕ ವಲಸೆ ಕಾರ್ಮಿಕರಂತೆ ಮಾರ್ಕಸ್ ಸಹ ಮನೆಯತ್ತ ಹೊರಟಿದ್ದರು. ಆದರೆ ತೆಲಂಗಾಣದ ಖಮ್ಮಂ ಜಿಲ್ಲೆ ತಲುಪಿದ ಮಾರ್ಕಸ್ ಲಾಕ್ಡೌನ್ ಕಾರಣದಿಂದಾಗಿ ಮುಂದೆ ಸಾಗಲು ಸಾಧ್ಯವಾಗಿಲ್ಲ.
ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಿದ್ದ 45 ವರ್ಷದ ಮಾರ್ಕಸ್ರನ್ನು ಡಾ. ಅನ್ನಂ ಶ್ರೀನಿವಾಸನ್ ನಡೆಸುತ್ತಿರುವ ಎನ್ಜಿಓಗೆ ಜಿಲ್ಲಾಡಳಿತ ಒಪ್ಪಿಸಿತ್ತು.
ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು
ಹತ್ತು ದಿನಗಳ ಹಿಂದಷ್ಟೇ ತಮ್ಮ ಹೆಸರು ಹಾಗು ವಿಳಾಸವನ್ನು ಸ್ಮರಿಸಿಕೊಳ್ಳಲು ಶಕ್ತರಾದ ಮಾರ್ಕಸ್ರನ್ನು ಜಿಲ್ಲಾ ನ್ಯಾಯಾಧೀಶ ಹಾಗೂ ಮುಖ್ಯ ಮ್ಯಾಜಿಸ್ಟ್ರೇಟ್ ಆನಂದ್ಮಣಿ ತ್ರಿಪಾಠಿ ನೇತೃತ್ವದಲ್ಲಿ ಅವರ ಸಹೋದರನಿಗೆ ಒಪ್ಪಿಸಲಾಗಿದೆ.