alex Certify ಅವಳಿ ಮಕ್ಕಳಿಗೆ ಪೋಷಕರಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳಿಗೆ ಪೋಷಕರಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ ದಂಪತಿ

ಬಾಲಿವುಡ್​ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಟ್ವಿಟರ್​ನ ಮೂಲಕ ಈ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪತಿ ಜೀನ್ ಗುಡ್​ ಇನಫ್​ ಜೊತೆ ಇರುವ ಫೋಟೋ ಶೇರ್​ ಮಾಡಿರುವ ಪ್ರೀತಿ ಜಿಂಟಾ ತಾವು ಅವಳಿ ಮಕ್ಕಳ ಪೋಷಕರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪುತ್ರನಿಗೆ ಜಯ್​ ಹಾಗೂ ಪುತ್ರಿಗೆ ಜಿಯಾ ಎಂದು ನಾಮಕರಣ ಮಾಡಿದ್ದಾರೆ.

ಎಲ್ಲರಿಗೂ ಹಾಯ್​, ಇಂದು ನಾನು ನಿಮ್ಮೆಲ್ಲರ ಜೊತೆಯಲ್ಲಿ ಒಂದು ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅವಳಿ ಮಕ್ಕಳನ್ನು ನಾನು ಹಾಗೂ ಜೀನ್​ ಕುಟುಂಬಕ್ಕೆ ಸ್ವಾಗತಿಸುವ ಈ ಘಳಿಗೆಯಿಂದ ತುಂಬಾನೇ ಸಂತಸಗೊಂಡಿದ್ದೇವೆ. ನಮ್ಮ ಹೃದಯವಂತೂ ಈಗ ಪ್ರೀತಿ ಹಾಗೂ ಕೃತಜ್ಞತೆಯಿಂದ ತುಂಬಿದೆ. ನಮ್ಮ ಜೀವನದ ಈ ಹೊಸ ಹಂತದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ನಮ್ಮ ಜೊತೆಯಾದ ವೈದ್ಯರು, ದಾದಿಯರು, ಬಾಡಿಗೆ ತಾಯಿ ಎಲ್ಲರಿಗೂ ನಮ್ಮ ಧನ್ಯವಾದಗಳು. ಜೀನ್​, ಪ್ರೀತಿ, ಜಯ್​ ಹಾಗೂ ಜಿಯಾ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿ ಜಿಂಟಾ ಹಾಗೂ ಜೀನ್​​ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಬಳಿಕ ಅಮೆರಿಕದಲ್ಲಿ ವಾಸವಿದ್ದಾರೆ. ಟ್ವಿಟರ್​ನಲ್ಲಿ ಈ ಸಿಹಿಸುದ್ದಿ ಹಂಚಿಕೊಂಡ ಪ್ರೀತಿಜಿಂಟಾಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪ್ರೀತಿ ಜಿಂಟಾಗೆ ಈಗ 46 ವರ್ಷ. ಅವರು ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.

— Preity G Zinta (@realpreityzinta) November 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...