
ಎಲ್ಲರಿಗೂ ಹಾಯ್, ಇಂದು ನಾನು ನಿಮ್ಮೆಲ್ಲರ ಜೊತೆಯಲ್ಲಿ ಒಂದು ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅವಳಿ ಮಕ್ಕಳನ್ನು ನಾನು ಹಾಗೂ ಜೀನ್ ಕುಟುಂಬಕ್ಕೆ ಸ್ವಾಗತಿಸುವ ಈ ಘಳಿಗೆಯಿಂದ ತುಂಬಾನೇ ಸಂತಸಗೊಂಡಿದ್ದೇವೆ. ನಮ್ಮ ಹೃದಯವಂತೂ ಈಗ ಪ್ರೀತಿ ಹಾಗೂ ಕೃತಜ್ಞತೆಯಿಂದ ತುಂಬಿದೆ. ನಮ್ಮ ಜೀವನದ ಈ ಹೊಸ ಹಂತದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ನಮ್ಮ ಜೊತೆಯಾದ ವೈದ್ಯರು, ದಾದಿಯರು, ಬಾಡಿಗೆ ತಾಯಿ ಎಲ್ಲರಿಗೂ ನಮ್ಮ ಧನ್ಯವಾದಗಳು. ಜೀನ್, ಪ್ರೀತಿ, ಜಯ್ ಹಾಗೂ ಜಿಯಾ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿ ಜಿಂಟಾ ಹಾಗೂ ಜೀನ್ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಬಳಿಕ ಅಮೆರಿಕದಲ್ಲಿ ವಾಸವಿದ್ದಾರೆ. ಟ್ವಿಟರ್ನಲ್ಲಿ ಈ ಸಿಹಿಸುದ್ದಿ ಹಂಚಿಕೊಂಡ ಪ್ರೀತಿಜಿಂಟಾಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪ್ರೀತಿ ಜಿಂಟಾಗೆ ಈಗ 46 ವರ್ಷ. ಅವರು ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.