alex Certify ಗರ್ಭಿಣಿಯರು ಗಂಟಲು ನೋವು ಸಮಸ್ಯೆಗೆ ಬಳಸಿ ಈ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಗಂಟಲು ನೋವು ಸಮಸ್ಯೆಗೆ ಬಳಸಿ ಈ ಮನೆ ಮದ್ದು

ಗರ್ಭಿಣಿಯರಿಗೆ ವಾತಾವರಣ ಬದಲಾದಂತೆಯೇ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಹಾಗಂತ ಅವರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧಗಳನ್ನು ಸೇವಿಸದೆ ಮನೆಮದ್ದಿನಿಂದ ನಿವಾರಿಸಿಕೊಂಡರೆ ತಾಯಿ, ಮಗುವಿಗೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಗಂಟಲು ನೋವು ಸಮಸ್ಯೆ ಕಾಡಿದರೆ ಈ ಮನೆಮದ್ದನ್ನು ಬಳಸಿ.

*ಗರ್ಭಿಣಿಯರಿಗೆ ಗಂಟಲು ನೋವು ಕಾಡಿದರೆ ಬೆಚ್ಚಗಿನ ನೀರಿಗೆ ಉಪ್ಪನ್ನು ಮಿಕ್ಸ್ ಮಾಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಕನಿಷ್ಠ 3 ಬಾರಿಯಾದರೂ ಮಾಡಿ. ಇದರಿಂದ ಗಂಟಲು ನೋವು ಶಮನಗೊಳ್ಳುತ್ತದೆ.

*ಅರಶಿನದಲ್ಲಿ ನೋವು ನಿವಾರಕ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಬೆಚ್ಚಗಿನ ಹಾಲಿಗೆ ಅರಶಿನ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಗಂಟಲು ನೋವು ವಾಸಿಯಾಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಸೇವಿಸಿ

*ಶುಂಠಿಯಲ್ಲಿ ನೋವು ನಿವಾರಕ ಹಾಗೂ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳಿವೆ. ಹಾಗಾಗಿ ಊಟವಾದ ಬಳಿಕ ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದನ್ನು ದಿನಕ್ಕೆ 2 ಕಪ್ ಕುಡಿದರೆ ಗಂಟಲು ನೋವಿನ ಜೊತೆಗೆ ವಾಂತಿ, ವಾಕರಿಕೆ, ಆಮ್ಲೀಯತೆ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...