ಗರ್ಭಿಣಿಯರಿಗೆ ವಾತಾವರಣ ಬದಲಾದಂತೆಯೇ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಹಾಗಂತ ಅವರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧಗಳನ್ನು ಸೇವಿಸದೆ ಮನೆಮದ್ದಿನಿಂದ ನಿವಾರಿಸಿಕೊಂಡರೆ ತಾಯಿ, ಮಗುವಿಗೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಗಂಟಲು ನೋವು ಸಮಸ್ಯೆ ಕಾಡಿದರೆ ಈ ಮನೆಮದ್ದನ್ನು ಬಳಸಿ.
*ಗರ್ಭಿಣಿಯರಿಗೆ ಗಂಟಲು ನೋವು ಕಾಡಿದರೆ ಬೆಚ್ಚಗಿನ ನೀರಿಗೆ ಉಪ್ಪನ್ನು ಮಿಕ್ಸ್ ಮಾಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಕನಿಷ್ಠ 3 ಬಾರಿಯಾದರೂ ಮಾಡಿ. ಇದರಿಂದ ಗಂಟಲು ನೋವು ಶಮನಗೊಳ್ಳುತ್ತದೆ.
*ಅರಶಿನದಲ್ಲಿ ನೋವು ನಿವಾರಕ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಬೆಚ್ಚಗಿನ ಹಾಲಿಗೆ ಅರಶಿನ ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಗಂಟಲು ನೋವು ವಾಸಿಯಾಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಸೇವಿಸಿ
*ಶುಂಠಿಯಲ್ಲಿ ನೋವು ನಿವಾರಕ ಹಾಗೂ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳಿವೆ. ಹಾಗಾಗಿ ಊಟವಾದ ಬಳಿಕ ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದನ್ನು ದಿನಕ್ಕೆ 2 ಕಪ್ ಕುಡಿದರೆ ಗಂಟಲು ನೋವಿನ ಜೊತೆಗೆ ವಾಂತಿ, ವಾಕರಿಕೆ, ಆಮ್ಲೀಯತೆ ನಿವಾರಣೆಯಾಗುತ್ತದೆ.