ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಊಟ-ಉಪಹಾರ ಮತ್ತು ಡಯಟ್ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಗರ್ಭಿಣಿಯರು ತಿನ್ನಬಾರದು. ಪಪ್ಪಾಯ ಮತ್ತು ಅನಾನಸ್ ಇವುಗಳಲ್ಲಿ ಪ್ರಮುಖವಾದದ್ದು.
ಈ ಎರಡು ಹಣ್ಣುಗಳ ಸೇವನೆಯನ್ನು ತಪ್ಪಿಸುವುದು ಮುಖ್ಯ. ಈ ಹಣ್ಣುಗಳನ್ನು ಸೇವಿಸಿದರೆ ಗರ್ಭ ಮತ್ತು ಭ್ರೂಣಕ್ಕೆ ಹಾನಿಯಾಗಬಹುದು. ಏಕೆಂದರೆ ಅವುಗಳಲ್ಲಿ ಕಂಡುಬರುವ ಬ್ರೋಮೆಲಿನ್ ಕಿಣ್ವವು ಗಮಸ್ಯೆಗಳನ್ನು ಉಂಟುಮಾಡಬಹುದು.
ಅನಾನಸ್ ಮತ್ತು ಪಪ್ಪಾಯಿಯಲ್ಲಿರುವ ಬ್ರೋಮೆಲಿನ್ ಎಂಬ ಕಿಣ್ವವು ಸ್ನಾಯುವಿನ ಸಂಕೋಚನವನ್ನು ಪ್ರೇರೇಪಿಸುತ್ತದೆ. ಇದು ಗರ್ಭಪಾತ ಅಥವಾ ಅವಧಿಗೆ ಮುಂಚಿತವಾಗಿ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಗರ್ಭಿಣಿಯರು ಹಸಿ ಪಪ್ಪಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಾಗಿದ ಪಪ್ಪಾಯಿಯ ಸೇವನೆಯನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಮಾಗಿದ ಪಪ್ಪಾಯಿಯನ್ನು ಸಹ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಅನಾನಸ್ ಹಣ್ಣಿನಲ್ಲಿ ಮಾತ್ರವಲ್ಲ, ಅನಾನಸ್ ಜ್ಯೂಸ್‌ನಲ್ಲಿ ಕೂಡ ಬ್ರೋಮೆಲೈನ್ ಎಂಬ ಕಿಣ್ವವೂ ಕಂಡುಬರುತ್ತದೆ. ಇದು ಗರ್ಭಾವಸ್ಥೆಯಲ್ಲಿ ಗರ್ಭಪಾತ ಅಥವಾ ಅವಧಿಪೂರ್ವ ಹೆರಿಗೆಗೆ ಕಾರಣವಾಗಬಹುದು. ಹಾಗಾಗಿ ಅನಾನಸ್ ಹಣ್ಣನ್ನು ಕೂಡ ಸೇವನೆ ಮಾಡದಂತೆ ವೈದ್ಯರು ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ.