alex Certify ಗರ್ಭಿಣಿಯರು ಅತಿಯಾದ ಬಾಯಾರಿಕೆ ನಿವಾರಿಸಿಕೊಳ್ಳಲು ಮಾಡಿ ಈ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಅತಿಯಾದ ಬಾಯಾರಿಕೆ ನಿವಾರಿಸಿಕೊಳ್ಳಲು ಮಾಡಿ ಈ ಉಪಾಯ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಬಾಯಾರಿಕೆ ಆಗುತ್ತಿರುತ್ತದೆ. ಹಾಗೇ ಅವರು ನೀರನ್ನು ಸರಿಯಾಗಿ ಕುಡಿಯಬೇಕು. ಆದರೆ ಕೆಲವರಿಗೆ ಅತಿಯಾದ ಬಾಯಾರಿಕೆ ಇರುತ್ತದೆ. ಇದನ್ನು ನಿಯಂತ್ರಿಸಲು ಈ ನೈಸರ್ಗಿಕ ಪರಿಹಾರವನ್ನು ಮಾಡಿ.

*ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇದು ದೇಹದಲ್ಲಿನ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಪೋಷಣೆಯನ್ನು ಸಹ ಮಾಡುತ್ತದೆ.

*ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಸಕ್ಕರೆ ಮುಕ್ತ ಹಣ್ಣಿನ ರಸ ಮತ್ತು ಹಾಲನ್ನು ಸಹ ಕುಡಿಯಬೇಕು.

*ಕಡಿಮೆ ಉಪ್ಪು ಮತ್ತು ಮಸಾಲೆಯುಕ್ತ ವಸ್ತುಗಳನ್ನು ಸೇವಿಸಿ. ಸೋಡಾ ಅಥವಾ ಕೆಫಿನ್ ಇರುವ ಪಾನೀಯಗಳನ್ನು ಕುಡಿಯಬೇಡಿ.

*ಯಾವಾಗಲೂ ಎಲ್ಲಿಗೆ ಹೋದರು ನಿಮ್ಮೊಂದಿಗೆ ನೀರಿನ ಬಾಟಲ್ ನ್ನು ತೆಗೆದುಕೊಂಡು ಹೋಗಿ. ಮನೆಯಲ್ಲಿ ನಿಂಬೆ ಪಾನಕ ತಯಾರಿಸಿ ಕುಡಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...