ಸಬ್ವೇಯಿಂದ ಆರ್ಡರ್ ಮಾಡಿದ ಸ್ಯಾಂಡ್ವಿಚ್ನಲ್ಲಿ ದೊಡ್ಡ ಚಾಕು ಕಂಡು ಗರ್ಭಿಣಿ ದಿಗ್ಭ್ರಮೆಗೊಳಗಾದ ಪ್ರಸಂಗ ನಡೆದಿದೆ.
ಇಂಗ್ಲೆಂಡ್ನ ಸಫೊಲ್ಕ್ನ 21 ವರ್ಷದ ಮಹಿಳೆ ನೆರಿಸ್ ಮೋಯ್ಸ್ 2 ವಾರಗಳ ಹಿಂದೆ ಹತ್ತಿರದ ಸಬ್ವೇನಿಂದ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದು, ಸ್ಯಾಂಡ್ವಿಚ್ ಒಳಗೆ ಹಳದಿ ಹ್ಯಾಂಡಲ್ ಬ್ಲೇಡ್ ಅನ್ನು ಕಂಡು ಆಶ್ಚರ್ಯಚಕಿತರಾದರು.
“ನಾನು ನನ್ನ ಸಂಗಾತಿ ಹಸಿದಿದ್ದೇವು, ನಾನು ಪ್ರಸ್ತುತ ಗರ್ಭಿಣಿಯಾಗಿದ್ದು ಕಡು ಬಯಕೆಯೊಂದಿಗೆ ಸಬ್ವೇಗೆ ಕರೆ ಮಾಡಿ ಆರ್ಡರ್ ನೀಡಲಾಗಿತ್ತು. ಆರ್ಡರ್ ಬಂದ ಕೂಡಲೇ ಅದನ್ನು ತೆರೆದು ನೋಡಿದಾಗ ಸ್ಥಂಭೀಭೂತಳಾದೆ. ನಾವಿಬ್ಬರೂ ಗಾಬರಿಯಿಂದ ಅಲ್ಲೇ ಕುಳಿತೆವು. ನನ್ನ ಸಂಗಾತಿ ಗೋರ್ಲೆಸ್ಟನ್ ಹೈ ಸ್ಟ್ರೀಟ್ನಲ್ಲಿರುವ ಸಬ್ವೇಗೆ ಕರೆ ಮಾಡಿ ನಿಮ್ಮ ಹಳದಿ ಚಾಕುಗಳಲ್ಲಿ ಒಂದನ್ನು ಕಳೆದುಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದ ಎಂದು ಆ ಮಹಿಳೆ ಘಟನೆ ವಿವರಣೆ ನೀಡಿದ್ದಾರೆ.