alex Certify ಸಬ್​ ವೇ ಸ್ಯಾಂಡ್​ ವಿಚ್​ನಲ್ಲಿ ಚಾಕು ಕಂಡು ಗರ್ಭಿಣಿಗೆ ಗಾಬರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಬ್​ ವೇ ಸ್ಯಾಂಡ್​ ವಿಚ್​ನಲ್ಲಿ ಚಾಕು ಕಂಡು ಗರ್ಭಿಣಿಗೆ ಗಾಬರಿ..!

ಸಬ್​ವೇಯಿಂದ ಆರ್ಡರ್​ ಮಾಡಿದ ಸ್ಯಾಂಡ್​ವಿಚ್​ನಲ್ಲಿ ದೊಡ್ಡ ಚಾಕು ಕಂಡು ಗರ್ಭಿಣಿ ದಿಗ್ಭ್ರಮೆಗೊಳಗಾದ ಪ್ರಸಂಗ ನಡೆದಿದೆ.

ಇಂಗ್ಲೆಂಡ್​ನ ಸಫೊಲ್ಕ್​ನ 21 ವರ್ಷದ ಮಹಿಳೆ ನೆರಿಸ್​ ಮೋಯ್ಸ್​ 2 ವಾರಗಳ ಹಿಂದೆ ಹತ್ತಿರದ ಸಬ್​ವೇನಿಂದ ಸ್ಯಾಂಡ್​ವಿಚ್​ ಆರ್ಡರ್​ ಮಾಡಿದ್ದು, ಸ್ಯಾಂಡ್​ವಿಚ್​ ಒಳಗೆ ಹಳದಿ ಹ್ಯಾಂಡಲ್​ ಬ್ಲೇಡ್​ ಅನ್ನು ಕಂಡು ಆಶ್ಚರ್ಯಚಕಿತರಾದರು.

“ನಾನು ನನ್ನ ಸಂಗಾತಿ ಹಸಿದಿದ್ದೇವು, ನಾನು ಪ್ರಸ್ತುತ ಗರ್ಭಿಣಿಯಾಗಿದ್ದು ಕಡು ಬಯಕೆಯೊಂದಿಗೆ ಸಬ್​ವೇಗೆ ಕರೆ ಮಾಡಿ ಆರ್ಡರ್​ ನೀಡಲಾಗಿತ್ತು. ಆರ್ಡರ್​ ಬಂದ ಕೂಡಲೇ ಅದನ್ನು ತೆರೆದು ನೋಡಿದಾಗ ಸ್ಥಂಭೀಭೂತಳಾದೆ. ನಾವಿಬ್ಬರೂ ಗಾಬರಿಯಿಂದ ಅಲ್ಲೇ ಕುಳಿತೆವು. ನನ್ನ ಸಂಗಾತಿ ಗೋರ್ಲೆಸ್ಟನ್​ ಹೈ ಸ್ಟ್ರೀಟ್​ನಲ್ಲಿರುವ ಸಬ್​ವೇಗೆ ಕರೆ ಮಾಡಿ ನಿಮ್ಮ ಹಳದಿ ಚಾಕುಗಳಲ್ಲಿ ಒಂದನ್ನು ಕಳೆದುಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದ ಎಂದು ಆ ಮಹಿಳೆ ಘಟನೆ ವಿವರಣೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...