ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಕಾಡ ದಾರಿಯಲ್ಲಿ ತಾತ್ಕಾಲಿಕ ಬಟ್ಟೆ ಡೋಲಿಯಲ್ಲಿ ಎಂಟು ಕಿಮೀ ಸಾಗಿದ ಆಘಾತಕಾರಿ ಘಟನೆ ವಿಡಿಯೋ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ (ಎಂಎಂ ಹಿಲ್) ಅರಣ್ಯ ಪ್ರದೇಶದ ಅಂಚಿನಲ್ಲಿರುವ ಜಿಲ್ಲೆಯ ದೊಡ್ವಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದೂರದ ಅರಣ್ಯ ಗ್ರಾಮಗಳ ನಿವಾಸಿಗಳಿಗೆ ಯಾವುದೇ ಸಾರಿಗೆ ಸೌಲಭ್ಯವನ್ನು ಅಧಿಕಾರಿಗಳು ಒದಗಿಸಿಲ್ಲ. ಗ್ರಾಮಸ್ಥರು ಗರ್ಭಿಣಿ ಮಹಿಳೆಯನ್ನು ತಮ್ಮ ಭುಜದ ಮೇಲೆ ಬಟ್ಟೆಯ ಡೋಲಿಯನ್ನು ಹೊತ್ತೊಯ್ಯುತ್ತಿರುವ ವಿಡಿಯೊ ಸಾರ್ವಜನಿಕರ ಗಮನ ಸೆಳೆದಿವೆ.
ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ʼಫ್ಯಾಶನ್ ಶೋʼ ಮರುಸೃಷ್ಟಿಯ ಈ ವಿಡಿಯೋ..!
ನಿಗದಿತ ದಿನಾಂಕಕ್ಕಿಂತ ಮುಂಚೆಯೇ ಶಾಂತಲಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮಸ್ಥರು ಯಾರೂ ಖಾಸಗಿ ವಾಹನ ಹೊಂದಿಲ್ಲದ ಕಾರಣ, ಬೆರಳೆಣಿಕೆಯಷ್ಟು ಗ್ರಾಮಸ್ಥರು ಮತ್ತು ಮಹಿಳೆಯರು ಕುಟುಂಬ ಸದಸ್ಯರು ಆಕೆಯನ್ನು 8 ಕಿಲೋಮೀಟರ್ ದೂರದ ಸುಲ್ವಾಡಿಯಲ್ಲಿರುವ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದ್ದಾರೆ.
ಬಟ್ಟೆ ಮತ್ತು ಮರದ ಕೋಲುಗಳಿಂದ ʼಡೋಲಿ’ ನಿರ್ಮಿಸಿ ದಟ್ಟವಾದ ಕಾಡಿನ ಮೂಲಕ ಹಾದು ಹೋಗಿದ್ದಾರೆ. ಅವರು ಬಂದ ದಾರಿ ಆನೆಗಳ ಆವಾಸ ಸ್ಥಾನವೂ ಹೌದು. ಹುಲಿ, ಕಾಡುಹಂದಿ, ಚಿರತೆ ಮುಂತಾದ ಕಾಡುಪ್ರಾಣಿಗಳ ದಾಳಿಗೆ ಹೆದರಿಕೊಂಡೇ ತಡ ರಾತ್ರಿ 1 ಗಂಟೆಗೆ ಪ್ರಯಾಣ ಆರಂಭಿಸಿದ ಗ್ರಾಮಸ್ಥರು ಬೆಳಗ್ಗೆ 6 ಗಂಟೆ ವೇಳೆಗೆ ಆರೋಗ್ಯ ಕೇಂದ್ರಕ್ಕೆ ಆಗಮಿಸಿದರು. ಶಾಂತಲಾ ಯಾವುದೇ ತೊಂದರೆ ಇಲ್ಲದೇ ಮಗುವಿಗೆ ಜನ್ಮ ನೀಡಿದ್ದಾರೆ.