alex Certify ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ʼಫ್ಯಾಶನ್​ ಶೋʼ ಮರುಸೃಷ್ಟಿಯ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ʼಫ್ಯಾಶನ್​ ಶೋʼ ಮರುಸೃಷ್ಟಿಯ ಈ ವಿಡಿಯೋ..!

ಹವಾಮಾನ ಬೇರೆ ಮಂಕಾಗಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಚೈತನ್ಯ ಕೂಡ ಕುಂದಿರಬಹುದು.ಇಂತಹ ಸಂದರ್ಭದಲ್ಲಿ ನೀವು ಲವಲವಿಕೆಯಿಂದ ಇರಬೇಕೆಂದುಕೊಂಡಿದ್ದರೆ ನಿಮಗೊಂದು ವಿಡಿಯೋ ಕಾದಿದೆ. ಫ್ಯಾಶನ್​ ಶೋಗಳಲ್ಲಿ ಯಾವೆಲ್ಲ ರೀತಿಯಲ್ಲಿ ಉಡುಪುಗಳನ್ನು ಧರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಶಹೀಲ್​​ ಶೆರ್ಮಾಂಟ್​​ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿದ್ದು ವಿಚಿತ್ರ ವಸ್ತುಗಳನ್ನು ಹಿಡಿದು ವ್ಯಕ್ತಿಯು ಕ್ಯಾಟ್​ ವಾಕ್​ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ 24 ವರ್ಷದ ಶಹೀಲ್​ ಎಂಬವರು ಸರಳವಾದ ಟೀ ಶರ್ಟ್ ಹಾಗೂ ಶಾರ್ಟ್ಸ್​ ಧರಿಸಿದ್ದಾರೆ. ಫ್ಯಾಶನ್​ ಶೋಗಳಲ್ಲಿ ಮಾಡೆಲ್​ಗಳನ್ನು ರ್ಯಾಂಪ್​ ವಾಕ್ ​ನ್ನು ಮರುಸೃಷ್ಟಿಸಿದ ಶಹೀಲ್​, ಶೆಡ್​, ವಾಕರ್​, ಶೀಟು ಸೇರಿದಂತೆ ವಿಚಿತ್ರ ವಸ್ತುಗಳನ್ನು ಹಿಡಿದು ರ್ಯಾಂಪ್​ ವಾಕ್​ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...