ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮೂಢನಂಬಿಕೆಗಳ ವಿರೋಧಿ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಅವರು, ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿಯವರು 2020ರಲ್ಲಿ ಖರೀದಿಸಿದ್ದ ತಮ್ಮ ಹೊಸ ಫಾರ್ಚುನರ್ ಕಾರಿಗೆ ಕೆಎ 49 ಎನ್ 2023 ನಂಬರ್ ಪಡೆದುಕೊಂಡಿದ್ದು, ಇದರ ಹಿಂದಿನ ಕಾರಣ ಈಗ ಬಹಿರಂಗವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಖಚಿತ ವಿಶ್ವಾಸದಲ್ಲಿದ್ದ ಅವರು, ಆಗಲೇ ಈ ಸಂಖ್ಯೆ ಪಡೆದುಕೊಂಡಿದ್ದು, ತಮ್ಮ ಹೊಸ ಕಾರನ್ನು ಸ್ಮಶಾನದಿಂದಲೇ ಬಳಸಲು ಆರಂಭಿಸಿದ್ದರು.