alex Certify ಜನಿಸಿ 1 ವರ್ಷದ ಬಳಿಕ ಪರಸ್ಪರ ಮುಖ ನೋಡಿಕೊಂಡ ಸಹೋದರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಿಸಿ 1 ವರ್ಷದ ಬಳಿಕ ಪರಸ್ಪರ ಮುಖ ನೋಡಿಕೊಂಡ ಸಹೋದರಿಯರು

ಇಸ್ರೇಲ್​​ನಲ್ಲಿ 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಯಾಮಿ ಸಹೋದರಿಯರ ತಲೆಯನ್ನು ಬೇರ್ಪಡಿಸಲಾಗಿದೆ. ಈ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆಯು ವೈದ್ಯಲೋಕದ ಇತಿಹಾಸದಲ್ಲಿ ನಮೂದಾಗಲಿದೆ.‌

ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನ ಬೀರ್ಶೆಬಾದ ಸೊರೊಕಾ ಮೆಡಿಕಲ್​ ಸೆಂಟರ್​​​ನಲ್ಲಿ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಗೂ ಅನೇಕ ತಿಂಗಳುಗಳ ಮುಂಚೆಯೇ ವೈದ್ಯರು ಸಾಕಷ್ಟು ಅಧ್ಯಯನ ನಡೆಸಿದ್ದರು ಎನ್ನಲಾಗಿದೆ.

ಶಿಶುಗಳು ಬದುಕುಳಿಯಲು ಸಾಧ್ಯತೆಯನ್ನು ಹೆಚ್ಚಿಸಲು ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಶಿಶುಗಳ ನೆತ್ತಿಯ ಮೇಲೆ ಚರ್ಮದ ಕಸಿ ಮಾಡುವ ಅಗತ್ಯವಿದೆ. ಅದೃಷ್ಟವಶಾತ್​​ ಈ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು ಶಿಶುಗಳಿಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

BIG NEWS: ಗಣೇಶೋತ್ಸವಕ್ಕೆ ಹೊಸ ಗೈಡ್ ಲೈನ್; 5 ದಿನದ ಬದಲು 3 ದಿನಕ್ಕೆ ಸೀಮಿತ; ಷರತ್ತಿನ ಮೇಲೆ ಷರತ್ತು ಹಾಕಿದ ಬಿಬಿಎಂಪಿ

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಅವಳಿ ಸಹೋದರಿಯರು ಒಬ್ಬರ ಮುಖವನ್ನು ಒಬ್ಬರು ನೋಡಲು ಸಾಧ್ಯವಾಗಿದೆ.
ಈ ಶಸ್ತ್ರಚಿಕಿತ್ಸೆಯನ್ನು ನಡೆಸಲು ಸಾಕಷ್ಟು ಮುಂಗಡ ತಯಾರಿ, ಅಧ್ಯಯನ ಹಾಗೂ ಅನುಭವದ ಅವಶ್ಯಕತೆ ತುಂಬಾನೇ ಇದೆ.

ಈ ಶಸ್ತ್ರಚಿಕಿತ್ಸೆಗೆ ತಂಡವನ್ನು ಆಯ್ಕೆ ಮಾಡಿದ ಬಳಿಕ 3 ಡಿ ಮಾಡೆಲ್​ನಲ್ಲಿ ತಯಾರಿ ನಡೆಸಲಾಗಿತ್ತು. ಆಸ್ಪತ್ರೆಯ 50 ಮಂದಿ ಸಿಬ್ಬಂದಿ ತಿಂಗಳುಗಟ್ಟಲೇ ತರಬೇತಿಯನ್ನು ನೀಡಲಾಗಿತ್ತು.

ಇದೊಂದು ಅತ್ಯಂತ ಅಪರೂಪದ ಹಾಗೂ ಕಠಿಣ ಶಸ್ತ್ರಚಿಕಿತ್ಸೆಯಾಗಿದೆ. ಅಲ್ಲದೇ ಇಸ್ರೇಲ್​​ನಲ್ಲಿ ಮೊದಲ ಶಸ್ತ್ರಚಿಕಿತ್ಸೆ ಇದಾಗಿರಬಹುದು ಎಂದು ವೈದ್ಯ ಮಿಕ್ಕಿ ಗಿಡೋನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...