alex Certify ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ

ರೀಲ್ಸ್​ ಮಾಡಿ ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚುತನದ ಹಾದಿ ತುಳಿಯವುದು ಹೊಸ ವಿಷಯವೇನಲ್ಲ. ಇಲ್ಲೊಬ್ಬ ತನ್ನ ಮನೆಯನ್ನು ಪೀನಟ್​ ಬಟರ್​ನಿಂದ ಪೇಂಟ್​ ಮಾಡಿದ್ದಾನೆ!

ಕಾರ್ಬಿನ್ ಮಿಲೆಟ್ ಎಂಬ 19 ವರ್ಷದ ಪೆನ್ಸಿಲ್ವೇನಿಯಾದ ನಿವಾಸಿ ತಮಾಷೆಯ ವೀಡಿಯೊಗಳಿಂದಾಗಿ ಪ್ರಸಿದ್ದಿ ಹೊಂದಿದ್ದಾರೆ. ಈಗ ತಮಾಷೆಗಾಗಿ ಪೀನಟ್​ ಬಟರ್​ನಿಂದ ಅಡುಗೆ ಮನೆಯನ್ನು ಪೇಂಟಿಂಗ್​ ಮಾಡಿದ್ದಾನೆ!

ಈ ವಿಡಿಯೋ ಇದಾಗಲೇ 38 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋದಲ್ಲಿ ಮೊದಲು ಅಡುಗೆಮನೆಯ ನೋಟ ನೋಡಬಹುದು. ಬಹು ಕ್ಯಾಬಿನೆಟ್‌ಗಳು, ವಾಷ್​ ಬೇಸಿನ್, ಮೈಕ್ರೋವೇವ್ ಓವನ್ ಮತ್ತು ಆಧುನೀಕರಿಸಿದ ಸ್ಟೌವ್ ಅನ್ನು ಅಡುಗೆ ಕೋಣೆ ಒಳಗೊಂಡಿದೆ.

ನಂತರ ಈತ ಎಲ್ಲದಕ್ಕೂ ಪೀನಟ್​ ಬಟರ್​ನಿಂದ ಪೇಂಟಿಂಗ್​ ಮಾಡಿದ್ದಾನೆ. ಇದು ಅವನಿಗೆ ತಮಾಷೆಯಂತೆ. ಈತನ ಫಾಲೋವರ್ಸ್​ ಕೂಡ ಈತನ ವಿಡಿಯೋ ನೋಡಿ ಖುಷಿಪಡುತ್ತಿದ್ದಾರೆ. ಕೆಲವರು ಇದು ಹುಚ್ಚುತನದ ಪರಮಾವಧಿ ಎಂದಿದ್ದಾರೆ. ಏನೇ ಆದರೂ ತಾನು ಅಂದುಕೊಂಡದ್ದನ್ನು ಈತ ಸಾಧಿಸಿದ್ದು, 38 ಮಿಲಿಯನ್​ ವೀಕ್ಷಣೆ ಗಳಿಸಿದ್ದಾರೆ.

— sarah on the street ¨̮⁷🪞 (@taejooncult) February 26, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...