
ಕಾರ್ಬಿನ್ ಮಿಲೆಟ್ ಎಂಬ 19 ವರ್ಷದ ಪೆನ್ಸಿಲ್ವೇನಿಯಾದ ನಿವಾಸಿ ತಮಾಷೆಯ ವೀಡಿಯೊಗಳಿಂದಾಗಿ ಪ್ರಸಿದ್ದಿ ಹೊಂದಿದ್ದಾರೆ. ಈಗ ತಮಾಷೆಗಾಗಿ ಪೀನಟ್ ಬಟರ್ನಿಂದ ಅಡುಗೆ ಮನೆಯನ್ನು ಪೇಂಟಿಂಗ್ ಮಾಡಿದ್ದಾನೆ!
ಈ ವಿಡಿಯೋ ಇದಾಗಲೇ 38 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋದಲ್ಲಿ ಮೊದಲು ಅಡುಗೆಮನೆಯ ನೋಟ ನೋಡಬಹುದು. ಬಹು ಕ್ಯಾಬಿನೆಟ್‌ಗಳು, ವಾಷ್ ಬೇಸಿನ್, ಮೈಕ್ರೋವೇವ್ ಓವನ್ ಮತ್ತು ಆಧುನೀಕರಿಸಿದ ಸ್ಟೌವ್ ಅನ್ನು ಅಡುಗೆ ಕೋಣೆ ಒಳಗೊಂಡಿದೆ.
ನಂತರ ಈತ ಎಲ್ಲದಕ್ಕೂ ಪೀನಟ್ ಬಟರ್ನಿಂದ ಪೇಂಟಿಂಗ್ ಮಾಡಿದ್ದಾನೆ. ಇದು ಅವನಿಗೆ ತಮಾಷೆಯಂತೆ. ಈತನ ಫಾಲೋವರ್ಸ್ ಕೂಡ ಈತನ ವಿಡಿಯೋ ನೋಡಿ ಖುಷಿಪಡುತ್ತಿದ್ದಾರೆ. ಕೆಲವರು ಇದು ಹುಚ್ಚುತನದ ಪರಮಾವಧಿ ಎಂದಿದ್ದಾರೆ. ಏನೇ ಆದರೂ ತಾನು ಅಂದುಕೊಂಡದ್ದನ್ನು ಈತ ಸಾಧಿಸಿದ್ದು, 38 ಮಿಲಿಯನ್ ವೀಕ್ಷಣೆ ಗಳಿಸಿದ್ದಾರೆ.
https://twitter.com/yayfour/status/1629862084253974531?ref_src=twsrc%5Etfw%7Ctwcamp%5Etweetembed%7Ctwterm%5E1629862084253974531%7Ctwgr%5E36257272f4ed19bd9dac1841a75d13bdb426f2f9%7Ctwcon%5Es1_&ref_url=https%3A%2F%2Fwww.indiatimes.com%2Ftrending%2Fhuman-interest%2Fprankster-covers-parents-kitchen-in-peanut-butter-594880.html