
ಟೋಕಿಯೋ ಒಲಂಪಿಕ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೂಲಕ ಭಾರತ ಟೋಕಿಯೊ ಒಲಂಪಿಕ್ ನಲ್ಲಿ ಮೂರನೇ ಚಿನ್ನದ ಪದಕ ಗೆದ್ದಂತಾಗಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದಿದ್ದಾರೆ.
ಬ್ಯಾಡ್ಮಿಂಟನ್ ನಲ್ಲಿ ಮನೋಜ್ ಕಂಚಿನ ಪದಕ ಗೆದ್ದಿದ್ದು, 50 ಮೀ ಪಿಸ್ತೂಲ್ ನಲ್ಲಿ ಮನೀಶ್ ನರ್ವಾಲ್ ಹಾಗೂ ಸಿಂಹರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 17 ಪದಕಗಳು ಲಭ್ಯವಾಗಿವೆ.