
ಹುಬ್ಬಳ್ಳಿ: ನಾಯಕರು ನೈತಿಕವಾಗಿ ಶುದ್ಧವಾಗಿರಬೇಕು. ಮಾಧ್ಯಮಗಳಲ್ಲಿ ವರದಿ ಬಗ್ಗೆ ನೋಡಿದ್ದೇನೆ. ನಮ್ಮದು ಶಿಸ್ತಿನ ಪಕ್ಷವಾಗಿದೆ. ಬಿಜೆಪಿಯಲ್ಲಿ ಇದನ್ನೆಲ್ಲ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವರದಿ ಬಂದ ಕೂಡಲೇ ತೀರ್ಮಾನಿಸಲ್ಲ. ಸತ್ಯಾಸತ್ಯತೆ ಅರಿತು ತನಿಖೆ ನಡೆಸಬೇಕು. ನಾಯಕರು ಕ್ಲೀನ್ ಆಗಿರಬೇಕು ಎಂದು ಹೇಳಿದ್ದಾರೆ.
ನಾಳೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಯಬೇಕು. ಇದರ ಬಗ್ಗೆ ನನಗೇನೂ ವಿವರವಾಗಿ ಗೊತ್ತಿಲ್ಲ. ಶೇಕಡ ನೂರರಷ್ಟು ತನಿಖೆ ನಡೆಯಲಿದೆ. ಸಿಎಂ ಮತ್ತು ರಾಜ್ಯಾಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.