ಸಾಮಾನ್ಯ ಜನರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಾ ಬಂದಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.
ಪ್ರತಿ ತಿಂಗಳು ಬರೀ 1 ರೂ. ಅಥವಾ ವರ್ಷಕ್ಕೆ 12 ರೂ. ಹೂಡಿಕೆ ಮಾಡಿ ಎರಡು ಲಕ್ಷ ರೂಪಾಯಿಗಳ ಅಪಘಾತದ ವಿಮೆಗೆ ಅರ್ಹರಾಗುವಂತೆ ಮಾಡುತ್ತೆ ಈ ಯೋಜನೆ. ಬಹಳ ಕಡಿಮೆ ವೆಚ್ಚದಲ್ಲಿ ಜೀವ ವಿಮೆ ಒದಗಿಸುವ ಈ ಯೋಜನೆಯ ಕೆಲವೊಂದು ಕುತೂಹಲಕಾರಿ ಅಂಶಗಳು ಇಂತಿವೆ:
ಪ್ರತಿ ವರ್ಷದ ಮೇ 31ರಂದು ಪ್ರೀಮಿಯಂ ದುಡ್ಡನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ಕಡಿತ ಮಾಡಲಾಗುತ್ತದೆ. ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಖಾಲಿ ಇರದಂತೆ ನೋಡಿಕೊಳ್ಳಬೇಕು.
ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ
ಈ ವಿಮೆಗೆ ಚಂದಾದಾರರಾಗಲು ನೀವು 18-70 ವರ್ಷದೊಳಗಿನವರಾಗಿರಬೇಕು. ನಿಮ್ಮ ಬ್ಯಾಂಕ್ ಖಾತೆಯನ್ನೇ ಈ ಪಾಲಿಸಿಗೆ ಲಿಂಕ್ ಮಾಡಬಹುದಾಗಿದೆ. ವಿಮಾದಾರರಿಗೆ ಅಕಸ್ಮಾತ್ ಸಾವು ಅಥವಾ ಅಂಗವೈಕಲ್ಯ ಉಂಟಾದಲ್ಲಿ ಎರಡು ಲಕ್ಷ ರೂ.ಗಳ ಮೊತ್ತ ಖಾತ್ರಿಯಾಗಿ ನೀಡಲಾಗುತ್ತದೆ.
ಯಾವುದೇ ಬ್ಯಾಂಕ್ ಮೂಲಕ ನೀವು ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ.