alex Certify ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ ಪ್ರದೇಶ)ಯನ್ನು ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಯೋಜನೆಯನ್ನು ಡಿಸೆಂಬರ್ 31, 2024 ರವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಈಗಾಗಲೇ ಮಂಜೂರಾದ ಮನೆ ಪೂರ್ಣಗೊಳಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.

ಪ್ರಮುಖ PMAY-U ವಸತಿ ಯೋಜನೆಯು ದೇಶದಾದ್ಯಂತ ನಗರ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರವು ಜಾರಿಗೊಳಿಸುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದೆ.

ಜೂನ್ 2015 ರಲ್ಲಿ ಪ್ರಾರಂಭವಾಯಿತು. ‘ಎಲ್ಲರಿಗೂ ವಸತಿ’ ಕಲ್ಪಿಸುವ ಯೋಜನೆಗೆ ಮೂಲ ಗಡುವು ಮಾರ್ಚ್ 2022. ಈ ಯೋಜನೆಯು ದೇಶದ ಸಂಪೂರ್ಣ ನಗರ ಪ್ರದೇಶವನ್ನು ಒಳಗೊಂಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮನವಿಯನ್ನು ಆಧರಿಸಿ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ PMAY-ಅರ್ಬನ್ ಅನುಷ್ಠಾನದ ಅವಧಿಯನ್ನು ಡಿಸೆಂಬರ್ 31, 2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

2017 ರಲ್ಲಿ, ಮೂಲ ಯೋಜಿತ ಬೇಡಿಕೆ 100 ಲಕ್ಷ ಮನೆಗಳು. ಈ ಬೇಡಿಕೆಗೆ ವಿರುದ್ಧವಾಗಿ 102 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. 62 ಲಕ್ಷ ಮನೆಗಳು ಪೂರ್ಣಗೊಂಡಿವೆ. ಒಟ್ಟು ಮಂಜೂರಾದ 123 ಲಕ್ಷ ಮನೆಗಳಲ್ಲಿ, 40 ಲಕ್ಷ ಮನೆಗಳ ಪ್ರಸ್ತಾವನೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ತಡವಾಗಿ(ಕಳೆದ 2 ವರ್ಷಗಳ ಯೋಜನೆಯಲ್ಲಿ) ಸ್ವೀಕರಿಸಲಾಗಿದೆ. ಅವುಗಳನ್ನು ಪೂರ್ಣಗೊಳಿಸಲು 2 ವರ್ಷಗಳು ಬೇಕಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...