ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. ಹಾಗಾಗಿ ದೇಹವನ್ನು ಬೆಚ್ಚಗಿರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ.
*ಶಿರ್ಸಾಸನ : ಇದು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿರಿಸಲು ಸಹಕಾರಿಯಾಗಿದೆ. ಇದರಲ್ಲಿ ತಲೆಕೆಳಗಾಗಿರುವುದು ಮೆದುಳಿಗೆ ರಕ್ತದ ಹರಿವು ಹೆಚ್ಚಿಸುತ್ತದೆ ಮತ್ತು ಇಡೀ ದೇಹವನ್ನು ಬಲಪಡಿಸುತ್ತದೆ. ಇದು ಇಡೀ ದೇಹದೊಳಗೆ ರಕ್ತದ ಮೂಲಕ ಉಷ್ಣತೆಯನ್ನು ಹರಡಿ ದೇಹವನ್ನು ಬೆಚ್ಚಗಾಗಿಸುತ್ತದೆ.
*ಕುಂಭಕಾಸನ : ಚಳಿಗಾಲದಲ್ಲಿ ಸದೃಢವಾಗಿರಲು ಮತ್ತು ಬೆಚ್ಚಗಾಗಿರಲು ಈ ಯೋಗವನ್ನು ಮಾಡಿ. ಈ ಭಂಗಿಯಲ್ಲಿ ಹೆಚ್ಚು ಕಾಲ ಇರುವುದರಿಂದ ದೇಹದಾದ್ಯಂತ ಶಾಖವು ವ್ಯಾಪಿಸುತ್ತಿರುವ ಅನುಭವವನ್ನು ಪಡೆಯುತ್ತೀರಿ. ಹಾಗೇ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಭುಜ, ಎದೆ, ಕುತ್ತಿಗೆ, ಬೆನ್ನನ್ನು ಬಲಪಡಿಸುತ್ತದೆ.
*ನವಸಾನ : ಇದು ಕಿಬ್ಬೊಟ್ಟೆಯ ಪ್ರದೇಶ ಹಾಗೂ ಸೊಂಟದ ಬಾಗುವಿಕೆಯನ್ನು ಬಲಪಡಿಸುತ್ತದೆ. ಇದು ದೇಹದಾದ್ಯಂತ ಶಾಖವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಕೇಂದ್ರೀಕರಿಸುತ್ತದೆ.