alex Certify ಪ್ರಭಾಸ್‌ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್‌ʼ ಟೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಭಾಸ್‌ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್‌ʼ ಟೀಂ

ಭಾರತೀಯ ಸಿನೆಮಾದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಲಿರುವ ಪ್ರಭಾಸ್ ಅಭಿನಯದ ʼಸಲಾರ್‌ʼ ಚಿತ್ರ ಭಾರೀ ಸದ್ದು ಮಾಡುತ್ತಿದೆ.

ಕೆಜಿಎಫ್ ನಿದೇರ್ಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಶೃತಿ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್‌ನ ಎರಡನೇ ಹಂತ ಮುಗಿದಿದ್ದು, ಮುಂದಿನ ಹಂತ ಶೀಘ್ರವೇ ಸೆಟ್ಟೇರಲಿದೆ.

ಸಲಿಂಗಿಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ

ಈ ಚಿತ್ರವನ್ನು ಕೆಜಿಎಫ್ ಸೀರೀಸ್‌ಗಿಂತ ದೊಡ್ಡದಾಗಿ ಮಾಡಲು ಚಿತ್ರ ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ. ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ಶೂಟಿಂಗ್ ಆಗುತ್ತಿರುವ ಸಲಾರ್‌‌ ಅನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು.

ಕೆಜಿಎಫ್‌ ಖ್ಯಾತಿಯ ರವಿ ಬಸ್ರೂರ್‌ ಈ ಚಿತ್ರಕ್ಕೆ ಮ್ಯೂಸಿಕ್ ಕಾಂಪೋಸ್ ಮಾಡುತ್ತಿದ್ದು, ಭುವನ್ ಗೌಡ ಸಿನಿಮಾಟೋಗ್ರಫಿ ಮಾಡಲಿದ್ದಾರೆ. ಚಿತ್ರದ ಮೂಲಕ ಪ್ರಭಾಸ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...