alex Certify ಅವಧಿಗೂ ಮುನ್ನ ಪಿಎಫ್ ದುಡ್ಡು ಹಿಂಪಡೆಯುವುದು ಹೇಗೆ..? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿಗೂ ಮುನ್ನ ಪಿಎಫ್ ದುಡ್ಡು ಹಿಂಪಡೆಯುವುದು ಹೇಗೆ..? ಇಲ್ಲಿದೆ ಉಪಯುಕ್ತ ಮಾಹಿತಿ

ಸರ್ಕಾರಿ ಪ್ರಾಯೋಜಿತವಾದ ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) ಒಂದು ಉತ್ತಮ ರಿಟರ್ನ್ಸ್ ಕೊಡಬಲ್ಲ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಸುದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ನಿವೃತ್ತಿ ನಂತರದ ಬದುಕನ್ನ ಸರಳಗೊಳಿಸಲು ಅನುಕೂಲವಾಗಲಿದೆ.

ವಿತ್ತ ಸಚಿವಾಲಯದಿಂದ 1968 ರಲ್ಲಿ ಪರಿಚಯಿಸಲಾದ ಈ ಯೋಜನೆಯಲ್ಲಿ ಹೂಡುವ ದುಡ್ಡಿನ ಮೇಲೆ 7.1% ವಾರ್ಷಿಕ ಬಡ್ಡಿ ಸಿಗಲಿದೆ. ಖಾತೆದಾರರು ಎಷ್ಟು ಪ್ರಮಾಣದಲ್ಲಿ ದುಡ್ಡು ಹೂಡಬೇಕು ಎನ್ನುವ ವಿಚಾರದಲ್ಲಿ ಪಿಪಿಎಫ್ ಒಂದು ಫ್ಲೆಕ್ಸಿಬಲ್ ಯೋಜನೆಯಾಗಿದೆ. ವಾರ್ಷಿಕ 500 ರೂ.ಗಳಿಂದ ಹಿಡಿದು 1,50,000 ರೂ.ಗಳವರೆಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಭಾರತ ಸರ್ಕಾರದ ಪ್ರಾಯೋಜಿತ ಯೋಜನೆಯು ರಿಸ್ಕ್‌ ರಹಿತವಾಗಿದ್ದು, ಶೇರು ಮಾರುಕಟ್ಟೆಗಳಂತೆ ಪ್ರತಿನಿತ್ಯವೂ ದರಗಳಲ್ಲಿ ಅಸ್ಥಿರ ಬದಲಾವಣೆಗಳು ಆಗುವುದಿಲ್ಲ.

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್

ಪಿಪಿಎಫ್‌ನ ಮೆಚ್ಯೂರಿಟಿ ಅವಧಿಯು 15 ವರ್ಷಗಳಿದ್ದು, ಖಾತೆದಾರರು ತಮ್ಮ ಖಾತೆಯನ್ನು ಈ ಅವಧಿಗೂ ಮುನ್ನವೇ ಮುಚ್ಚಬಹುದಾಗಿದೆ. ಪಿಪಿಎಫ್ ಹಿಂಪಡೆತದ ನಿಯಮಗಳ ಪ್ರಕಾರ, ಖಾತೆದಾರರು ತಮ್ಮ ಖಾತೆಯನ್ನು ನಿರ್ದಿಷ್ಟ ಷರತ್ತುಗಳಿಗೆ ಅನ್ವಯವಾಗಿ ನಿಷ್ಕ್ರಿಯಗೊಳಿಸಬಹುದಾಗಿದೆ. ಇದಕ್ಕಾಗಿ ಖಾತೆಯು ಕನಿಷ್ಠ ಐದು ವಿತ್ತೀಯ ವರ್ಷಗಳನ್ನು ಪೂರೈಸಿರಬೇಕು.

ಪಿಪಿಎಫ್ ಹಿಂಪಡೆತದ ನಿಯಮಗಳು

ಪಿಪಿಎಫ್ ದುಡ್ಡನ್ನು ಸಂಪೂರ್ಣವಾಗಿ ಹಿಂಪಡೆಯಲು ಖಾತಾದಾರರು 15ನೇ ವರ್ಷದ ಅಂತ್ಯಕ್ಕೆ ಫಾರಂ ಸಿ ಅನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಸಲ್ಲಿಸಬೇಕು. ಒಂದು ವೇಳೆ ನಿಮಗೆ ಖಾತೆಯನ್ನು ನಿಷ್ಕ್ರಿಯಗೊಳಿಸಲು ಇಷ್ಟವಾಗದೇ ಇದ್ದಲ್ಲಿ, ಐದು ವರ್ಷಗಳ ಬ್ಲಾಕ್‌ ಗಳಂತೆ ಕೊಡುಗೆ ಮುಂದುವರೆಸಿಕೊಂಡು ಖಾತೆಯನ್ನು ಜೀವಂತ ಇಡಬಹುದು. ಈ ಪ್ರಕರಣದಲ್ಲಿ, ಖಾತೆ ನಿಷ್ಕ್ರಿಯವಾಗುವವರೆಗೂ ಖಾತೆಯಲ್ಲಿರುವ ದುಡ್ಡಿನ ಮೇಲೆ ಬಡ್ಡಿ ಸೇರುತ್ತಾ ಸಾಗುತ್ತದೆ. ವಿತ್ತೀಯ ವರ್ಷವೊಂದರಲ್ಲಿ ಖಾತಾದಾರರು ಯಾವುದೇ ಮೊತ್ತದಲ್ಲಿ ದುಡ್ಡನ್ನು ಹಿಂದಕ್ಕೆ ಪಡೆಯಬಹುದು.

ತಿಂಗಳಿಗೆ 5 ಸಾವಿರ ರೂ.ವರೆಗೆ ಪಿಂಚಣಿ: ಅಟಲ್ ಪೆನ್ಷನ್ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್

ಮೆಚ್ಯೂರಿಟಿಗೂ ಮುನ್ನ ಪಿಪಿಎಫ್ ಹಿಂಪಡೆತ

ಖಾತೆಗೆ ಕನಿಷ್ಠ ಐದು ವರ್ಷಗಳು ತುಂಬಿದ ಮೇಲೆ ಮಾತ್ರವೇ ಪಿಪಿಎಫ್ ಖಾತಾದಾರರು ತಮ್ಮ ದುಡ್ಡು ಹಿಂದಕ್ಕೆ ಪಡೆಯಲು ಸಾಧ್ಯ. ನಾಲ್ಕನೇ ವಿತ್ತೀಯ ವರ್ಷದ ಅಂತ್ಯಕ್ಕೆ ಖಾತೆಯಲ್ಲಿರುವ 50%ರಷ್ಟು ದುಡ್ಡನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಇಲ್ಲವಾದಲ್ಲಿ, ಅದರ ಹಿಂದಿನ ವರ್ಷದಂದು 50%ದಷ್ಟು ದುಡ್ಡನ್ನು ಹಿಂದಕ್ಕೆ ಪಡೆಯಬಹುದಾಗಿದೆ.

ʼಸ್ಮಾರ್ಟ್ ಫೋನ್ʼ ಕೊಳ್ಳುವ ಮುನ್ನ ಈ ವಿಷಯದ ಕುರಿತು ಇರಲಿ ಎಚ್ಚರ…..!

ಅವಧಿಗೂ ಮುನ್ನ ಪಿಪಿಎಫ್ ಖಾತೆ ಮುಚ್ಚಲು

ಕೆಲವೊಂದು ಪರಿಸ್ಥಿತಿಗಳಲ್ಲಿ ಖಾತಾದಾರರು ತಮ್ಮ ಪಿಪಿಎಫ್ ಖಾತೆಗಳನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಖಾತೆದಾರರ ಸಂಗಾತಿ, ಮಕ್ಕಳು ಅಥವಾ ಹೆತ್ತವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದಲ್ಲಿ ಹೀಗೆ ಮಾಡಬಹುದು. ಖಾತಾದಾರರು ದುಡ್ಡನ್ನು ಉನ್ನತ ಶಿಕ್ಷಣಕ್ಕಾಗಿ ಬಳಸಲು ಇಚ್ಛಿಸಿದರೂ ಸಹ ಖಾತೆಯ ಅವಧಿಪೂರ್ವ ಮುಚ್ಚಳಕ್ಕೆ ಮುಂದಾಗಬಹುದು. ಇದಕ್ಕೆ ಕನಿಷ್ಠ ಐದು ವರ್ಷಗಳವರೆಗೂ ಕಾಯಬೇಕು ಹಾಗೂ ಸೂಕ್ತ ದಾಖಲೆಗಳನ್ನು ಒದಗಿಸಬೇಕು.

ಅವಧಿಗೂ ಮುನ್ನ ಪಿಪಿಎಫ್ ಖಾತೆ ಮುಚ್ಚಿದ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರಕ್ಕಿಂತ 1% ಕಡಿಮೆ ಬಡ್ಡಿ ದರವನ್ನು ಖಾತೆಯಲ್ಲಿರುವ ಹಣದ ಮೇಲೆ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...