alex Certify ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ.

ಭಾರತ ಸರ್ಕಾರ ನಡೆಸುತ್ತಿರುವ ಎರಡೂ ಹೂಡಿಕೆ ಯೋಜನೆಗಳ ಮೂಲಕ ನಿಮಗೆ ಬಹಳಷ್ಟು ಪ್ರಯೋಜನಗಳಿವೆ. 1968ರಲ್ಲಿ ರಾಷ್ಟ್ರೀಯ ಉಳಿತಾಯ ಸಂಸ್ಥೆಯಿಂದ ಪಿಪಿಎಫ್ ಆರಂಭಗೊಂಡರೆ, ಎನ್‌ಪಿಎಸ್‌ ಅನ್ನು ಕೇವಲ ಸರ್ಕಾರಿ ನೌಕರರಿಗೆಂದು 2004ರಲ್ಲಿ ಆರಂಭಿಸಿ, 2009ರಲ್ಲಿ ಎಲ್ಲ ಕ್ಷೇತ್ರಗಳ ನೌಕರರಿಗೂ ವಿಸ್ತರಿಸಲಾಗಿದೆ.

ಈ ಯೋಜನೆಗಳ ಮೇಲೆ ನೀವು ಸರಿಯಾಗಿ ಯೋಚಿಸಿ ಹೂಡಿಕೆ ಮಾಡಿದರೆ ನಿಮ್ಮ ಹಣವು ವರ್ಷ ವರ್ಷದ ಹಣದುಬ್ಬರಕ್ಕೆ ಅನುಗುಣವಾಗಿ ಬಡ್ಡಿದರ ಪಡೆದುಕೊಂಡು ಚೆನ್ನಾಗಿ ವರ್ಧನೆಯಾಗಲಿದೆ. ಪ್ರಸಕ್ತ ಪಿಪಿಎಫ್‌ 7.1% ಬಡ್ಡಿಯನ್ನು ಕೊಡುತ್ತಿದೆ. ಪಿಪಿಎಫ್‌ನಲ್ಲಿ 15 ವರ್ಷಗಳ ಮಟ್ಟಿಗೆ ಹೂಡಿಕೆ ಮಾಡಿ, ಮೆಚ್ಯೂರಿಟಿ ಬಳಿಕ ನಿರ್ಗಮಿಸಬಹುದು ಅಥವಾ ವಿಸ್ತರಣೆಯನ್ನೂ ಕೋರಬಹುದಾಗಿದೆ. ಇದೇ ವೇಳೆ ಎನ್‌ಪಿಎಸ್‌ನಲ್ಲಿ ನೀವು ನಿವೃತ್ತರಾಗುವವರೆಗೆ ಅಥವಾ 60 ವರ್ಷ ವಯಸ್ಸಾಗುವವರೆಗೂ ಹೂಡಿಕೆ ಮಾಡಬಹುದು.

ಕೊರೊನಾ ಚಿಕಿತ್ಸೆಗೆ SBI ನೀಡುತ್ತಿದೆ ವೈಯಕ್ತಿಕ ಸಾಲ

ಪಿಪಿಎಫ್ ಹೂಡಿಕೆಗಳ ಮೂಲಕ ಒಂದು ಕೋಟಿಯಷ್ಟು ಸಂಪಾದನೆ ಮಾಡಲು ನೀವು ಅಂದುಕೊಂಡಿದ್ದರೆ, ಪ್ರಸಕ್ತ ಇರುವ 7.1% ಬಡ್ಡಿದರದಲ್ಲಿ 25 ವರ್ಷಗಳ ಕಾಲ ಹೂಡಿಕೆ ಮಾಡುತ್ತಲೇ ಇರಬೇಕು.

ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ

ಪ್ರತಿ ತಿಂಗಳು 12,500 ರೂಪಾಯಿಗಳನ್ನು ಪ್ರತಿ ತಿಂಗಳು 25 ವರ್ಷಗಳ ಮಟ್ಟಿಗೆ ನೀವು ಹೂಡಿಕೆ ಮಾಡುತ್ತಾ ಬಂದಲ್ಲಿ, ಅದು ಒಂದು ಕೋಟಿ ರೂ.ಗಳ ಮಟ್ಟಿಗೆ ಬೆಳೆಯುತ್ತದೆ. ಇದೇ ರೀತಿ 20 ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಬಂದಲ್ಲಿ, ನಿಮ್ಮ ದುಡ್ಡು 73 ಲಕ್ಷ ರೂ.ಗಳಾಗಿ ಬೆಳೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...