alex Certify ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ

ನೀರಿನಿಂದ ಹೊರಬಂದ ಡಾಲ್ಫಿನ್ ಬಾಲಕನ ಕೈಗೆ ಕಚ್ಚಿದ ಶಾಕಿಂಗ್​ ವಿಡಿಯೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಉಕ್ರೇನ್​ನ ಬ್ಲಾಕ್​ ಸೀ ರೆಸಾರ್ಟ್​ನಲ್ಲಿ ಈ ಘಟನೆ ಸಂಭವಿಸಿದೆ.

ಈ ವಿಡಿಯೋದಲ್ಲಿ ಆರು ವರ್ಷದ ಬಾಲಕ ಕೈ ಕೆಳಗೆ ಹಾಕಿ ಡಾಲ್ಫಿನ್​ ಜೊತೆ ಆಟವಾಡುತ್ತಿದ್ದ. ಸ್ವಲ್ಪ ಹೊತ್ತು ಸುಮ್ಮನೇ ಇದ್ದ ಡಾಲ್ಫಿನ್​ ಬಳಿಕ ನೀರಿನಿಂದ ಜಿಗಿದು ಬಾಲಕ ಕೈಗೆ ಬಾಯಿ ಹಾಕಿದೆ. ಇದರಿಂದ ಬಾಲಕನ ಕೈಗೆ ಗಾಯವಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಾಲ್ಫಿನ್​ ತರಬೇತುದಾರ, ಆತನ ಕೈಗೆ ಗಾಯ ಮಾಡಬೇಕು ಅನ್ನೋದು ಡಾಲ್ಫಿನ್​​ನ ಉದ್ದೇಶವಾಗಿರಲಿಲ್ಲ. ಆತನ ಕೈಯಲ್ಲಿ ತಿನ್ನಲು ತಿನಿಸು ಇರಬಹುದೆಂದು ಡಾಲ್ಫಿನ್​ ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ .

ಈ ರೀತಿ ನೀರಿಗೆ ಕೈ ಇಳಿಸುವವರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ನೆಮೋ ಡಾಲ್ಫಿನರಿಯಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

View this post on Instagram

A post shared by ПОДСЛУШАНО ОДЕССА НОВОСТИ (@odessa_hello)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...