ಸಣ್ಣ ಉಳಿತಾಯ ಯೋಜನೆಗಳಲ್ಲಿ ಬಹಳ ಜನಪ್ರಿಯ ಮತ್ತು ಸುರಕ್ಷಿತವಾಗಿರುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್). ಸದ್ಯಕ್ಕೆ ಶೇ.7.1 ರಷ್ಟು ಬಡ್ಡಿಯನ್ನು ಪಿಪಿಎಫ್ ಖಾತೆದಾರರಿಗೆ ನೀಡಲಾಗುತ್ತಿದೆ. ಅಂಚೆ ಕಚೇರಿಯಲ್ಲಿ ಸುಲಭವಾಗಿ ಪಿಪಿಎಫ್ ಖಾತೆಯನ್ನು ಅರ್ಹ ವ್ಯಕ್ತಿಗಳು ತೆರೆಯಬಹುದಾಗಿದೆ. ಅನ್ಯ ಉಳಿತಾಯ ಯೋಜನೆಗಳ ಹೋಲಿಕೆಯಲ್ಲಿ ಪಿಪಿಎಫ್‍ನಿಂದ ಎರಡು ಲಾಭವಿದೆ. ಒಂದು, ದೀರ್ಘಾವಧಿಗೆ ನಿಶ್ಚಿತವಾದ ಕಾರಣ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಾಗಿ ಒಳ್ಳೆಯ ಪ್ರಮಾಣದ ನಗದು ಶೇಖರಣೆ ಆಗುತ್ತದೆ. ಎರಡನೇಯದ್ದು, ಆದಾಯ ತೆರಿಗೆ ಕಡಿತದ ವಿನಾಯಿತಿಗೂ ಈ ಖಾತೆಯನ್ನು ತೋರಿಸಬಹುದಾಗಿದೆ.
ಚಿಪ್ಸ್ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ
15 ವರ್ಷಗಳ ಬಳಿಕ ಮೆಚೂರಿಟಿ ಆಗುವ ಪಿಪಿಎಫ್ ಖಾತೆಯಿಂದ ಠೇವಣಿ ಇರಿಸಿದ ಐದು ವರ್ಷಗಳ ನಂತರದಿಂದ ಹಣ ಹಿಂಪಡೆಯಬಹುದಾಗಿದೆ. ಒಂದು ವೇಳೆ ಇಂಥ ಪಿಪಿಎಫ್ ಖಾತೆ ನಿಷ್ಕ್ರಿಯವಾಗಿದ್ದಲ್ಲಿ, ಮೊದಲು ಅಂಚೆ ಕಚೇರಿ ಅಥವಾ ಬ್ಯಾಂಕ್ ಅಧಿಕಾರಿಗೆ ಮನವಿ ಪತ್ರವೊಂದನ್ನು ನೀಡಬೇಕಾಗುತ್ತದೆ.
ಅವರು ಖಾತೆಯನ್ನು ಪರಿಶೀಲಿಸಿದ ನಂತರ, ಹಣಕಾಸು ವರ್ಷವೊಂದಕ್ಕೆ 500 ರೂ. ಸಲ್ಲಿಸಿ, ಖಾತೆಯನ್ನು ಪುನಾರಂಭಿಸಬಹುದಾಗಿದೆ. ಮುಂದೆಯೂ ಕನಿಷ್ಠ 500 ರೂ.ಗಳನ್ನು ವರ್ಷಕ್ಕೆ ಒಮ್ಮೆಯಾದರೂ ಪಾವತಿಸಿದಲ್ಲಿ ಖಾತೆ ನಿಷ್ಕ್ರಿಯಗೊಳ್ಳುವುದಿಲ್ಲ. ಪಿಪಿಎಫ್ ಖಾತೆಯು ಬಹಳ ವರ್ಷಗಳಿಂದ ನಿಷ್ಕ್ರಿಯವಾಗಿಯೇ ಇದ್ದರೆ, ಪ್ರತಿ ಹಣಕಾಸು ವರ್ಷಕ್ಕೆ 500 ರೂ. ಜತೆಗೆ ದಂಡದ ಮೊತ್ತವಾಗಿ 50 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.