alex Certify ದೀಪಾವಳಿಗೆ ಭರ್ಜರಿ ಗಿಫ್ಟ್: ಗೃಹಬಳಕೆ ವಿದ್ಯುತ್ ದರ ಕಡಿತ, ನೌಕರರ ಡಿಎ ಶೇ. 11 ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಗೆ ಭರ್ಜರಿ ಗಿಫ್ಟ್: ಗೃಹಬಳಕೆ ವಿದ್ಯುತ್ ದರ ಕಡಿತ, ನೌಕರರ ಡಿಎ ಶೇ. 11 ರಷ್ಟು ಹೆಚ್ಚಳ

ಚಂಡೀಗಢ: ದೀಪಾವಳಿ ಕೊಡುಗೆಯಾಗಿ ಪಂಜಾಬ್ ನಲ್ಲಿ ಗೃಹಬಳಕೆ ವಿದ್ಯುತ್ ದರವನ್ನು ಕಡಿತಗೊಳಿಸಲಾಗಿದೆ. ಯೂನಿಟ್ ಗೆ 3 ರೂಪಾಯಿ ಕಡಿಮೆ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಬಳಕೆ ವಿದ್ಯುತ್ ದರವನ್ನು 3 ರೂ. ಕಡಿಮೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 3316 ಕೋಟಿ ರೂಪಾಯಿ ಹೊರಬೀಳಲಿದೆ.

ಪಂಜಾಬ್ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ ಮೂರು ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದೆ. ಈಗ ಪಂಜಾಬ್ ದೇಶದಲ್ಲೇ ಅತ್ಯಂತ ಕಡಿಮೆ ವಿದ್ಯುತ್ ದರವನ್ನು ಹೊಂದಿದೆ ಎಂದು ಸಿಎಂ ಚರಣಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಇದಲ್ಲದೆ, ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) 11 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದರು.

ಪಂಜಾಬ್ ಜನತೆಗೆ 300 ಯೂನಿಟ್ ಉಚಿತ ವಿದ್ಯುತ್ ಬೇಕೋ ಅಥವಾ ಅಗ್ಗದ ವಿದ್ಯುತ್ ಬೇಕೋ ಎಂದು ತಿಳಿಯಲು ಸಮೀಕ್ಷೆ ನಡೆಸಿದ್ದು, ಹೆಚ್ಚಿನ ಜನರು ಅಗ್ಗದ ವಿದ್ಯುತ್ ಬೇಕು ಎಂದು ಹೇಳಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ವಿದ್ಯುತ್ ದರವನ್ನು ಕಡಿತಗೊಳಿಸುತ್ತಿದ್ದೇವೆ ಎಂದರು.

ಶೂನ್ಯದಿಂದ 7 ಕಿಲೋವ್ಯಾಟ್‌ವರೆಗಿನ ದರವನ್ನು 3 ರೂಪಾಯಿ ಕಡಿತಗೊಳಿಸಲಾಗುತ್ತಿದೆ. ಮೊದಲ 100 ಯೂನಿಟ್‌ಗಳಿಗೆ 4.19 ರೂ. ಇದ್ದು, ಪ್ರತಿ ಯೂನಿಟ್‌ಗೆ 3 ರೂಪಾಯಿ ಇಳಿಕೆಯಾಗಲಿದೆ. 100 ಯೂನಿಟ್‌ಗಳವರೆಗೆ ಪ್ರತಿ ಯೂನಿಟ್‌ಗೆ ಕೇವಲ 1.19 ರೂ. ದರ ಇದೆ. ಅದೇ ರೀತಿ 300 ಯೂನಿಟ್ ವರೆಗೆ ಪ್ರತಿ ಯೂನಿಟ್ ಗೆ ಈ ಹಿಂದೆ 7 ರೂಪಾಯಿ ವಿಧಿಸಲಾಗುತ್ತಿತ್ತು. ಆದರೆ ಈಗ ಪ್ರತಿ ಯೂನಿಟ್‌ಗೆ 4 ರೂಪಾಯಿ ಆಗಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...