alex Certify ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರ: ಎರಡು ದಿನಗಳಲ್ಲಿ ಪರಿಹಾರ ಖಚಿತ ಎಂದ ಸಚಿವ ಸುನೀಲ್​ ಕುಮಾರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರ: ಎರಡು ದಿನಗಳಲ್ಲಿ ಪರಿಹಾರ ಖಚಿತ ಎಂದ ಸಚಿವ ಸುನೀಲ್​ ಕುಮಾರ್​​

ರಾಜ್ಯದಲ್ಲಿ ಉಂಟಾಗಿರುವ ಕಲ್ಲಿದ್ದಲ್ಲು ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಇಂಧನ ಸಚಿವ ವಿ.ಸುನೀಲ್​ ಕುಮಾರ್​ ಈ ಸಮಸ್ಯೆಗೆ ಒಂದೆರಡು ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆಪಿಟಿಸಿಎಲ್​​ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಮಾತನಾಡಿದ ಸುನೀಲ್​ ಕುಮಾರ್​ ಉಷ್ಣ ವಿದ್ಯುತ್​ ಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ ಉಂಟಾಗಲಿದೆ ಎಂದು ನನಗೆ ಅನಿಸುತ್ತಿಲ್ಲ. ಓಡಿಶಾದ ಮಹಾನಂದಿ ಗಣಿಯಿಂದ ಹೊರಟಿರುವ ರೇಕ್​ ನಾಳೆ ರಾಜ್ಯಕ್ಕೆ ಬಂದು ತಲುಪಲಿದೆ. ಇನ್ನೊಂದು ರೇಕ್​ ಬುಧವಾರ ಬರಲಿದೆ. ಹೀಗಾಗಿ ಎಲ್ಲಾ ಸಮಸ್ಯೆಗಳು ಒಂದೆರಡು ದಿನಗಳಲ್ಲಿ ಪರಿಹಾರವಾಗಲಿದೆ ಎಂದು ಹೇಳಿದರು.

ರೇಖಾ-ಬಿಗ್ ಬಿ ಹೆಸರು ಕೇಳ್ತಿದ್ದಂತೆ ಅಚ್ಚರಿಗೊಂಡ ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ತಡೆಯಲು ಸಿಎಂ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಕೇಂದ್ರದಿಂದ ಸ್ಪಂದನೆ ಕೂಡ ಸಿಕ್ಕಿದೆ. ಪ್ರಸ್ತುತ ರಾಜ್ಯಕ್ಕೆ 10 ರೇಕ್​ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಇದನ್ನು 14 ರೇಕ್​​ಗೆ ಹೆಚ್ಚಳ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಗೆ ಮನವಿ ಮಾಡಿದ್ದೇವೆ ಎಂದೂ ಇದೇ ವೇಳೆ ಹೇಳಿದರು.

ಸದ್ಯಕ್ಕೆ 2 ರೇಕ್​ ರಾಜ್ಯಕ್ಕೆ ತ್ವರಿತಗತಿಯಲ್ಲಿ ಬಂದು ತಲುಪಲಿದೆ. ಉಳಿದ ರೇಕ್​ಗಳು ನವೆಂಬರ್​ ವೇಳೆಗೆ ರಾಜ್ಯಕ್ಕೆ ಬರಲಿವೆ. ಕಲ್ಲಿದ್ದಲು ವ್ಯತ್ಯಯ ಉಂಟಾದ್ದರಿಂದ ಕೆಲ ಸ್ಥಾವರಗಳಲ್ಲಿ ವಿದ್ಯುತ್​ ಉತ್ಪಾದನೆ ಕಡಿಮೆ ಮಾಡಿದ್ದೇವೆ. ಆದರೆ ಎಲ್ಲೂ ಸಂಪೂರ್ಣವಾಗಿ ವಿದ್ಯುತ್​ ಉತ್ಪಾದನೆ ಸ್ಥಗಿತಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...