ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ತಡೆಯಲು ಸಿಎಂ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಕೇಂದ್ರದಿಂದ ಸ್ಪಂದನೆ ಕೂಡ ಸಿಕ್ಕಿದೆ. ಪ್ರಸ್ತುತ ರಾಜ್ಯಕ್ಕೆ 10 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಇದನ್ನು 14 ರೇಕ್ಗೆ ಹೆಚ್ಚಳ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಮನವಿ ಮಾಡಿದ್ದೇವೆ ಎಂದೂ ಇದೇ ವೇಳೆ ಹೇಳಿದರು.
ಸದ್ಯಕ್ಕೆ 2 ರೇಕ್ ರಾಜ್ಯಕ್ಕೆ ತ್ವರಿತಗತಿಯಲ್ಲಿ ಬಂದು ತಲುಪಲಿದೆ. ಉಳಿದ ರೇಕ್ಗಳು ನವೆಂಬರ್ ವೇಳೆಗೆ ರಾಜ್ಯಕ್ಕೆ ಬರಲಿವೆ. ಕಲ್ಲಿದ್ದಲು ವ್ಯತ್ಯಯ ಉಂಟಾದ್ದರಿಂದ ಕೆಲ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಿದ್ದೇವೆ. ಆದರೆ ಎಲ್ಲೂ ಸಂಪೂರ್ಣವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.