alex Certify Power Cut : ಮಡಿಕೇರಿಯ ಈ ಪ್ರದೇಶಗಳಲ್ಲಿ ಅ.30 ರಂದು ವಿದ್ಯುತ್ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Power Cut : ಮಡಿಕೇರಿಯ ಈ ಪ್ರದೇಶಗಳಲ್ಲಿ ಅ.30 ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ : ಕುಶಾಲನಗರ ವ್ಯಾಪ್ತಿಯ ಹಾರಂಗಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸುಂದರನಗರದಿಂದ ಚಿಕ್ಕತ್ತೂರು ಗ್ರಾಮದವರೆಗೆ ನಿರ್ವಹಿಸಬೇಕಿರುವುದರಿಂದ 220/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಎಸ್ಎಲ್ಎನ್ ಫೀಡರ್ನಲ್ಲಿ ಅಕ್ಟೋಬರ್, 30 ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆದ್ದರಿಂದ ಕೂಡ್ಲೂರು, ಕೂಡುಮಂಗಳೂರು, ಸುಂದರನಗರ, ಚಿಕ್ಕತ್ತೂರು, ದೊಡ್ಡತ್ತೂರು, ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...