alex Certify ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: ಕಡುಬಡತನದಿಂದ ಪಾರಾಗಲು ಮೂರು ದಿನದ ಹಸುಗೂಸನ್ನು ಮಾರಾಟ ಮಾಡಿದ ತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ಈ ಸುದ್ದಿ: ಕಡುಬಡತನದಿಂದ ಪಾರಾಗಲು ಮೂರು ದಿನದ ಹಸುಗೂಸನ್ನು ಮಾರಾಟ ಮಾಡಿದ ತಾಯಿ..!

ಕಡು ಬಡತನದಿಂದ ಕಂಗೆಟ್ಟಿದ್ದ 32 ವರ್ಷದ ಮಹಿಳೆ ತನ್ನ ಮೂರು ದಿನಗಳ ಹಸುಗೂಸನ್ನು 1.78 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಮದ್​ ನಗರ ಜಿಲ್ಲೆಯ ಶಿರಡಿ ಪಟ್ಟಣದಲ್ಲಿ ಸಂಭವಿಸಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಂಬಿವಿಲಿ ಪಟ್ಟಣದ ಮಾನ್ಪಾಡಾ ಠಾಣಾ ಪೊಲೀಸರು ಮಹಿಳೆ, ಮಗುವನ್ನು ಖರೀದಿಸಿದ ವ್ಯಕ್ತಿ ಹಾಗೂ ಈ ಅಪರಾಧದಲ್ಲಿ ಮಹಿಳೆಗೆ ಸಹಾಯ ಮಾಡಿದ ಇತರೆ ನಾಲ್ವರನ್ನು ಜೈಲಿಗಟ್ಟಿದ್ದಾರೆ.

ಸೆಪ್ಟೆಂಬರ್​ ತಿಂಗಳಲ್ಲಿ ಮಗುವಿಗೆ ಈ ಮಹಿಳೆ ಜನ್ಮ ನೀಡಿದ್ದಳು. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಮಗುವನ್ನು ಸಾಕುವುದು ಕಷ್ಟ ಎಂದೆನಿಸಿದ ಹಿನ್ನೆಲೆಯಲ್ಲಿ ಈಕೆ ಮಗುವನ್ನು ಮಾರಾಟ ಮಾಡಿದ್ದಾಳೆ. ಆದರೆ ಈ ಪ್ರಕರಣ ಕೆಲ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದೆ ಎಂದು ಮನ್ಪಡಾ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮಗು ಮಾರಾಟಕ್ಕಾಗಿ ಗ್ರಾಹಕರನ್ನು ಹುಡುಕುತ್ತಿದ್ದ ಈಕೆಗೆ ಅಹಮದ್​ನಗರ, ಕಲ್ಯಾಣ್​ ಹಾಗೂ ಮುಂಬೈನಲ್ಲಿ ವಾಸವಿದ್ದ ಮೂವರು ಮಹಿಳೆಯರು ಸಹಾಯ ಮಾಡಿದ್ದರು ಎನ್ನಲಾಗಿದೆ. ಗ್ರಾಹಕ ಸಿಕ್ಕ ಬಳಿಕ ಯಾವುದೇ ಕಾನೂನು ಕ್ರಮಗಳನ್ನು ಬಳಕೆ ಮಾಡದೆಯೇ ಮಗುವನ್ನು ಮಾರಾಟ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...