ಅಂಚೆ ಇಲಾಖೆ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಅಂಚೆ ಇಲಾಖೆ ಮಂಗಳವಾರ ಅಂಚೆ ಜೀವ ವಿಮಾ ಪಾಲಿಸಿಯ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು, ಡಿಜಿಲಾಕರ್ ಮೂಲಕ ಈ ಪಾಲಿಸಿ ಪಡೆಯಬಹುದು.
ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿ ಬಾಂಡ್‌ಗಳು ಈಗ ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಿರುತ್ತವೆ ಎಂದು ಅಂಚೆ ಇಲಾಖೆ ಮಾಹಿತಿ ನೀಡಿದೆ. ಡಿಜಿಟಲ್ ಪ್ರತಿಯನ್ನು ಎಲ್ಲಾ ವಹಿವಾಟುಗಳಿಗೆ ಮಾನ್ಯ ಮಾಡಲಾಗುತ್ತದೆ.
ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು
ಅಂಚೆ ಜೀವ ವಿಮಾ ಪಾಲಿಸಿ, ಭಾರತ ಸರ್ಕಾರದ ಜೀವ ವಿಮಾ ಯೋಜನೆಯಾಗಿದೆ. ಅಂಚೆ ಕಚೇರಿ ತನ್ನ ಮೂಲ ಕೆಲಸದ ಜೊತೆಗೆ ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುತ್ತದೆ. ಇದು ದೇಶದ ಅತ್ಯಂತ ಹಳೆಯ ವಿಮಾ ಯೋಜನೆಯಲ್ಲಿ ಒಂದಾಗಿದೆ. ಅಂಚೆ ಜೀವ ವಿಮೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಅಂದ್ರೆ ಫೆಬ್ರವರಿ 1, 1884ರಲ್ಲಿ ಆರಂಭವಾಯಿತು.
ಪಿ ಎಲ್ ಐ ಸಿ ಅಡಿಯಲ್ಲಿ 10 ಲಕ್ಷ ರೂಪಾಯಿವರೆಗೆ ಜೀವ ವಿಮೆಯನ್ನು ತೆಗೆದುಕೊಳ್ಳಬಹುದು. ಈ ಯೋಜನೆ ಅನೇಕ ವಿಶೇಷತೆಗಳನ್ನು ಹೊಂದಿದೆ. 5 ವರ್ಷ ಪೂರ್ಣಗೊಂಡ ನಂತರ ಈ ಪಾಲಿಸಿಯನ್ನು ಎಂಡೋಮೆಂಟ್ ಅಶ್ಯೂರೆನ್ಸ್ ಆಗಿ ಪರಿವರ್ತಿಸಬಹುದು.
SSLC ಪೂರಕ ಪರೀಕ್ಷೆ ಪಾಸಾದವರಿಗೆ ಮುಖ್ಯ ಮಾಹಿತಿ
ಈ ವಿಮೆ ಖರೀದಿಸುವ ಗ್ರಾಹಕರ ವಯಸ್ಸು 55 ವರ್ಷಗಳಿಗಿಂತ ಹೆಚ್ಚಿರಬಾರದು. ಆರು ವರ್ಷಗಳವರೆಗೆ ವಿಮೆಯನ್ನು ಖರೀದಿಸುವ ಗ್ರಾಹಕರು ಪಾಲಿಸಿಯನ್ನು ಬದಲಾಯಿಸಲು ಆಯ್ಕೆ ಮಾಡದಿದ್ದರೆ, ಪಾಲಿಸಿಯನ್ನು ಸಂಪೂರ್ಣ ಜೀವ ವಿಮೆಯಾಗಿ ಪರಿಗಣಿಸಲಾಗುತ್ತದೆ. ಸಾಲ ಸೌಲಭ್ಯ ಲಭ್ಯವಿದೆ. ಮೂರು ವರ್ಷಗಳ ನಂತರ ಸಾಲ ಪಡೆಯಬಹುದು.