
ಗಂಗಾನದಿಯುದ್ದಕ್ಕೂ ಇರುವ ವಾರಣಾಸಿಯ ಘಾಟ್ಗಳಲ್ಲಿ ಹಿಂದೂಯೇತರ ಪ್ರವೇಶವನ್ನು ನಿರ್ಬಂಧಿಸುವಂತ ಪೋಸ್ಟರ್ಗಳನ್ನು ಕಟ್ಟಡಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಕೆಲಸ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಮಾತನಾಡಿದ ಭಜರಂಗದಳದ ನಗರ ಸಂಚಾಲಕ ನಿಖಿಲ್ ತ್ರಿಪಾಠಿ ಈ ಪೋಸ್ಟರ್ ಮೂಲಕ ಘಾಟ್ಗಳನ್ನು ಪಿಕ್ನಿಕ್ ಸ್ಪಾಟ್ ಎಂದುಕೊಳ್ಳುವವರಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ಹೇಳಿದರು.
ಹಿಂದೂಯೇತರರಿಗೆ ನಾವು ಗಂಗಾ ನದಿಯ ಘಾಟ್ಗಳಿಂದ ದೂರವಿರುವಂತೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಏಕೆಂದರೆ ಇದು ಪಿಕ್ನಿಕ್ ಸ್ಪಾಟ್ ಅಲ್ಲ. ಇದೊಂದು ಸನಾತನ ಸಂಸ್ಕೃತಿಯ ಸಂಕೇತವಾಗಿದೆ ಎಂದು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನಗರ ಕಾರ್ಯದರ್ಶಿ ರಾಜನ್ ಗುಪ್ತಾ ಸನಾತನ ಧರ್ಮದ ಬಗ್ಗೆ ಗೌರವ ಇಲ್ಲದವರು ಘಾಟ್ಗಳು ಹಾಗೂ ದೇವಸ್ಥಾನಗಳಿಗೆ ಬರಬಾರದು. ಸನಾತನ ಧರ್ಮಕ್ಕೆ ಯಾರು ಗೌರವ ನೀಡುತ್ತಾರೋ ಅಂತವರನ್ನು ನಾವು ಸ್ವಾಗತಿಸುತ್ತೇವೆ. ಈ ಪೋಸ್ಟರ್ ವಿನಂತಿಯಲ್ಲ. ಬದಲಾಗಿ ಸನಾತಕ ಧರ್ಮವನ್ನು ಗೌರವಿಸದವರಿಗೆ ನೀಡಲಾದ ಎಚ್ಚರಿಕೆ ಎಂದು ಹೇಳಿದರು.
