ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆದರೆ, ಚಿತ್ತಾಳೆಯವರು ಅವಹೇಳನಾಕಾರಿ ಪೋಸ್ಟ್ ಮಾಡಿರುವುದು ಈಗಿನದ್ದಲ್ಲ. ಅದು 2020 ರ ಪೋಸ್ಟ್ ಆಗಿದೆ. ಈ ಪೋಸ್ಟ್ ಅನ್ನು ಅನೇಕ ಜನರು ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನೇ ಚಿತ್ತಾಳೆ ಇತ್ತೀಚೆಗೆ ಹಂಚಿಕೊಂಡಿದ್ದಾರೆ ಎಂದು ಮರಾಠಿಯ ಪ್ರಮುಖ ದಿನಪತ್ರಿಕೆ ಲೋಕಸತ್ತಾ ವರದಿ ಮಾಡಿದೆ.
SHOCKING NEWS: ಮನೆಯಲ್ಲಿದ್ದ ಚಿನ್ನವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ತಾಯಿ
ಶರದ್ ಪವಾರ್ ಅವರನ್ನು ಉದ್ದೇಶಿಸಿ ಚಿತ್ತಾಳೆ, `”ನಿಮಗಾಗಿ ನರಕ ಕಾಯುತ್ತಿದೆ’’, ನೀವು ಬ್ರಾಹ್ಮಣರ ವಿರೋಧಿ’’ ಎಂದೆಲ್ಲಾ ಮಾನಹಾನಿ ಆಗುವ ರೀತಿಯಲ್ಲಿ ಹೇಳಿಕೆಗಳನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನವಿ ಮುಂಬೈ ಪೊಲೀಸರು ಚಿತ್ತಾಳೆ ಅವರನ್ನು ಕಳೆದ ಶನಿವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯನ್ನು ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.