alex Certify SHOCKING NEWS: ಮನೆಯಲ್ಲಿದ್ದ ಚಿನ್ನವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮನೆಯಲ್ಲಿದ್ದ ಚಿನ್ನವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ತಾಯಿ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ದೋಚಿ ಪ್ರಿಯತಮನಿಗೆ ನೀಡಿದ್ದಾಳೆ ಎಂದು ಆರೋಪಿಸಿ ತಾಯಿಯೋರ್ವರು ಮಗಳ ವಿರುದ್ಧ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಮಗಳು ಮನೆಯಲಿದ್ದ ಚಿನ್ನಾಭರಣ ಕದ್ದು ಆಕೆಯ ಪ್ರಿಯತಮ ಮದನ್ ಗೆ ನೀಡಿದ್ದಾಳೆ ಎಂದು ತಾಯಿ ಮಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಾದ ದೀಪ್ತಿ (24) ಹಾಗೂ ಆಕೆಯ ಪ್ರಿಯತಮ ಮದನ್ (27) ನ್ನು ಬಂಧಿಸಿದ್ದಾರೆ.

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ

ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ, ವಿವಾಹ ವಿಚ್ಛೇದನ ಪಡೆದು ಬಳಿಕ ತಾಯಿ ಜತೆಯೇ ವಾಸವಾಗಿದ್ದಳು. ಅದಾಗಲೇ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಡ್ರೈವಿಂಗ್ ಸ್ಕೂಲ್ ಡ್ರೈವರ್ ಮದನ್ ನನ್ನು ಪ್ರೀತಿಸುತ್ತಿದ್ದಳು. ಪ್ರಿಯತಮನಿಗಾಗಿ ತಾಯಿಯ ಒಂದು ಕೆಜಿ ಬಂಗಾರವನ್ನೇ ಕದ್ದ ದೀಪ್ತಿ, ಅದೇ ಜಾಗದಲ್ಲಿ ರೋಲ್ಡ್ ಗೋಲ್ಡ್ ಬಂಗಾರ ತಂದು ಇಟ್ಟಿದ್ದಾಳೆ. ಅನುಮಾನಗೊಂಡ ತಾಯಿ ಮಗಳನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾಯಿಯ ಬಂಗಾರವನ್ನೇ ಕದ್ದು ಮಗಳು ಪ್ರಿಯತಮನೊಂದಿಗೆ ಮೋಜುಮಸ್ತಿ ಮಾಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...