alex Certify ರಜಾದಿನವೂ ಪೋಸ್ಟ್ ಆಫೀಸ್ ಓಪನ್: ರಾಷ್ಟ್ರಧ್ವಜ ಮಾರಾಟಕ್ಕೆ ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜಾದಿನವೂ ಪೋಸ್ಟ್ ಆಫೀಸ್ ಓಪನ್: ರಾಷ್ಟ್ರಧ್ವಜ ಮಾರಾಟಕ್ಕೆ ವ್ಯವಸ್ಥೆ

ನವದೆಹಲಿ: ರಾಷ್ಟ್ರ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ಅಂಚೆ ಕಚೇರಿಗಳು ಸ್ವಾತಂತ್ರ್ಯ ದಿನದವರೆಗೆ ರಜಾದಿನಗಳಲ್ಲಿ ತೆರೆದಿರುತ್ತವೆ.

‘ಹರ್ ಘರ್ ತಿರಂಗ ಅಭಿಯಾನ’ದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳು ಸ್ವಾತಂತ್ರ್ಯ ದಿನದ ಮೊದಲು ಬರುವ ರಜಾದಿನಗಳಲ್ಲಿ ತೆರೆದಿರುತ್ತವೆ.

ಸಂಪರ್ಕ ಸಚಿವಾಲಯ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಈ ತಿಂಗಳ 7, 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ರಾಷ್ಟ್ರಧ್ವಜಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ. ಎಲ್ಲಾ ವಿತರಣಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರ ಧ್ವಜಗಳನ್ನು ತಲುಪಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...