ಉಳಿತಾಯ ಹಾಗೂ ಹೂಡಿಕೆಗಳ ಮೇಲೆ ಭದ್ರತೆಯೊಂದಿಗೆ ಉತ್ತಮ ರಿಟರ್ನ್ಸ್ ಬೇಕಾದಲ್ಲಿ ಅಂಚೆ ಕಚೇರಿಯ ಹೆಸರು ಮೊದಲಿಗೆ ನೆನಪಿಗೆ ಬರುತ್ತದೆ. ಈ ಎರಡನ್ನೂ ಕೊಡಮಾಡುವ ಅನೇಕ ಸ್ಕೀಂಗಳನ್ನು ಅಂಚೆ ಕಚೇರಿ ಹೊಂದಿದೆ.
ನಿಮಗೆ ಉತ್ತಮ ರಿಟರ್ನ್ಸ್ ಕೊಡುವ ಯಶಸ್ವಿ ಸ್ಕೀಂ ಒಂದರ ಬಗ್ಗೆ ಇಲ್ಲಿ ಹೇಳಲು ಹೊರಟಿದ್ದೇವೆ. ಅಂಚೆ ಕಚೇರಿಯ ಮಾಸಿಕ ಹೂಡಿಕೆ ಸ್ಕೀಂ ಮೇಲೆ ನೀವು ಒಮ್ಮೆ ದುಡ್ಡು ಹೂಡಿಕೆ ಮಾಡಿದಲ್ಲಿ, ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ನಿಮಗೆ ರಿಟರ್ನ್ಸ್ ದೊರಕಲಿದೆ. ಜೊತೆಗೆ, ಸ್ಕೀಂ ಮೆಚ್ಯೂರಿಟಿ ಆದ ಘಳಿಗೆ ಏಕ-ಪಾವತಿಯಲ್ಲಿ ದುಡ್ಡೂ ಸಿಗಲಿದೆ.
ಅಂಚೆ ಕಚೇರಿಯ ಮಾಸಿಕ ಹೂಡಿಕೆ ಸ್ಕೀಂ ಮೇಲೆ ಸದ್ಯ ವಾರ್ಷಿಕ 6.6%ರಷ್ಟು ಬಡ್ಡಿ ದರ ಸಿಗುತ್ತಿದ್ದು, ಪ್ರತಿ ತಿಂಗಳೂ ಪಾವತಿ ಮಾಡಬಹುದಾಗಿದೆ. ಒಂದು ಖಾತೆಯಲ್ಲಿ ಗರಿಷ್ಠ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದ್ದು, ಜಂಟಿ ಖಾತೆಯಲ್ಲಿ 9 ಲಕ್ಷ ರೂಪಾಯಿಗಳವರೆಗೂ ಹೂಡಿಕೆ ಮಾಡಬಹುದಾಗಿದೆ. ಈ ಸ್ಕೀಂಗೆ ಐದು ವರ್ಷಗಳ ಅವಧಿ ಇದೆ.
ನಿಮ್ಮ ಹಸ್ತದಲ್ಲೂ ಈ ಅಕ್ಷರ ಮೂಡಿದ್ರೆ ಬದಲಾಗಲಿದೆ ʼಅದೃಷ್ಟʼ
ಜಂಟಿ ಖಾತೆಯನ್ನು ಮೂವರು ವಯಸ್ಕರವರೆಗೂ ತೆರೆಯಬಹುದಾಗಿದೆ. ಅಪ್ರಾಪ್ತರಾಗಿದ್ದಲ್ಲಿ ಅವರ ಪರವಾಗಿ ಪೋಷಕರು ಹಾಗೂ 10 ವರ್ಷ ಮೇಲ್ಪಟ್ಟ ಅಪ್ರಾಪ್ತರಾಗಿದ್ದಲ್ಲಿ ಅವರದ್ದೇ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದೆ.
ಅಂಚೆ ಕಚೇರಿ ಮಾಸಿಕ ಹೂಡಿಕೆ ಸ್ಕೀಂ ಹೂಡಿಕೆ :
– ಕನಿಷ್ಠ 1000 ರೂ. ಹಾಗೂ 100ರ ಗುಣಕಗಳಲ್ಲಿ ಖಾತೆ ತೆರೆಯಬೇಕು.
– ಜಂಟಿ ಖಾತೆಯಾಗಿದ್ದಲ್ಲಿ ಎಲ್ಲ ಖಾತೆದಾರರು ಸಮ ಪ್ರಮಾಣದ ಹೂಡಿಕೆಯನ್ನು ಹೊಂದಿರಬೇಕು.
– ಅಪ್ರಾಪ್ತರ ಪರವಾಗಿ ಪೋಷಕರು ತೆರೆಯುವ ಖಾತೆಗೆ ಇರುವ ಗರಿಷ್ಠಮಿತಿ ಪ್ರತ್ಯೇಕವಿರುತ್ತದೆ.
ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ
* ಯಾರಾದರೂ ಒಂದೇ ಬಾರಿಗೆ ಖಾತೆಯಲ್ಲಿ 50,000 ರೂ.ಗಳನ್ನು ಪಾವತಿ ಮಾಡಿದರೆ ಅವರಿಗೆ ಮುಂದಿನ ಐದು ವರ್ಷಗಳ ಮಟ್ಟಿಗೆ ಮಾಸಿಕ 275 ರೂ.ಗಳು ಅಥವಾ ವರ್ಷಕ್ಕೆ 3,300 ರೂ. ಸಿಗುತ್ತದೆ.
ಅಂದರೆ ಐದು ವರ್ಷಗಳ ಅವಧಿಯಲ್ಲಿ ಬಡ್ಡಿ ರೂಪದಲ್ಲಿ 16,500 ರೂ.ಗಳು ಈ ಹೂಡಿಕೆ ಮೇಲೆ ಜಮೆಯಾಗುತ್ತದೆ. ಹಾಗೇ ಲೆಕ್ಕ ಮಾಡಿದರೆ 4.5 ಲಕ್ಷ ರೂಪಾಯಿಗಳ ಹೂಡಿಕೆಯಿಂದ ಪ್ರತಿ ವರ್ಷ 29,700 ರೂ.ಗಳು ಹಾಗೂ ಐದು ವರ್ಷಗಳಲ್ಲಿ 1,48,500 ರೂ.ಗಳು ನಿಮ್ಮ ಖಾತೆಯಲ್ಲಿ ಜಮೆಯಾಗುತ್ತದೆ.
– ಖಾತೆ ತೆರೆದ ದಿನದಿಂದ ಮೆಚ್ಯೂರಿಟಿವರೆಗೂ ಪ್ರತಿ ತಿಂಗಳ ಅಂತ್ಯದಂದು ಬಡ್ಡಿ ಪಾವತಿ ಮಾಡಲಾಗುತ್ತದೆ.
– ಖಾತೆದಾರರು ಮಾಸಿಕ ಬಡ್ಡಿ ಕೇಳದೇ ಇದ್ದಲ್ಲಿ, ಆ ಬಡ್ಡಿಯ ಮೇಲೆ ಹೆಚ್ಚುವರಿ ಬಡ್ಡಿ ಏನೂ ಹುಟ್ಟುವುದಿಲ್ಲ.
– ಹೂಡಿಕೆದಾರರು ಹೆಚ್ಚುವರಿಯಾಗಿ ಹೂಡಿಕೆ ಮಾಡಿದರೆ, ಹೆಚ್ಚುವರಿ ಮೊತ್ತವನ್ನು ಮರಳಿಸಲಾಗುತ್ತದೆ.
– ಎಂಐಎಸ್ ಖಾತೆಯಿಂದ ಉತ್ಪತ್ತಿಯಾಗುವ ಮಾಸಿಕ ಬಡ್ಡಿಯನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೆ ಕ್ರೆಡಿಟ್ ಮಾಡಬಹುದು.
– ಹೂಡಿಕೆದಾರರ ಕೈಗೆ ಬರುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ.
ಐಪಿಎಲ್ ಪಂದ್ಯದಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕ್ಷೌರಿಕ….!
* ಹೂಡಿಕೆಯನ್ನು ಒಂದು ವರ್ಷಕ್ಕೂ ಮುಂಚೆ ಹಿಂಪಡೆಯುವಂತಿಲ್ಲ.
* ಒಂದು ವರ್ಷದ ಬಳಿಕ ಹಾಗೂ ಮೂರು ವರ್ಷಕ್ಕೂ ಮುಂಚೆ ಖಾತೆ ಮುಚ್ಚಲ್ಪಟ್ಟರೆ ಅಸಲಿನಲ್ಲಿ 2%ನಷ್ಟು ಕಡಿತ ಮಾಡಿಕೊಂಡು ಮಿಕ್ಕ ದುಡ್ಡನ್ನು ಮರಳಿಸಲಾಗುತ್ತದೆ.
* ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಖಾತೆ ಮುಚ್ಚಲ್ಪಟ್ಟರೆ ಅಸಲಿನ 1% ಮೊತ್ತವನ್ನು ಹಿಡಿದುಕೊಂಡು ದುಡ್ಡು ವಾಪಸ್ ನೀಡಲಾಗುತ್ತದೆ.
* ಅಂಚೆ ಕಚೇರಿಗೆ ಸೂಕ್ತವಾದ ಅರ್ಜಿ ಹಾಗೂ ಪಾಸ್‌ಬುಕ್ ಸಲ್ಲಿಸುವುದರೊಂದಿಗೆ ಖಾತೆಯನ್ನು ಅವಧಿಗೂ ಮುನ್ನ ನಿಷ್ಕ್ರಿಯಗೊಳಿಸಬಹುದಾಗಿದೆ.