alex Certify ಐಪಿಎಲ್​ ಪಂದ್ಯದಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕ್ಷೌರಿಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ ಪಂದ್ಯದಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕ್ಷೌರಿಕ….!

ಇಂಡಿಯನ್​ ಪ್ರೀಮಿಯರ್​ ಲೀಗ್​​ ಡ್ರೀಮ್​ ಟೀಮ್​ ಸ್ಪರ್ಧೆಯಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೊಬ್ಬ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ಪಂದ್ಯದ ವೇಳೆ ಅಶೋಕ್​ ಕುಮಾರ್​ ತಮ್ಮ ಡ್ರೀಮ್​ ಟೀಂನಲ್ಲಿ ಆಯ್ಕೆ ಮಾಡಿದ ಆಟಗಾರರ ಕಾರಣದಿಂದಾಗಿ ಈ ದೊಡ್ಡ ಮೊತ್ತದ ಬಹುಮಾನವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರದಂದು ಅಶೋಕ್​ ಕುಮಾರ್ ವಿಜೇತ ಎಂದು ಘೋಷಣೆ ಮಾಡಲಾಗಿತ್ತು .

ಈ ವಿಚಾರವಾಗಿ ಮಾತನಾಡಿದ ಅಶೋಕ್​, ಪಂದ್ಯ ಮುಗಿದ ಬಳಿಕ, ನಾನು ಮೊದಲ ಸ್ಥಾನದಲ್ಲಿದ್ದೆ. ಈ ಮೂಲಕ ನಾನು 1ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದೆ. ಕೆಲವೇ ಸಮಯದಲ್ಲಿ ನನಗೆ ಈ ಬಗ್ಗೆ ಅಧಿಕೃತ ಕರೆ ಕೂಡ ಬಂತು. ಕರೆಯಲ್ಲಿ ಮುಂದಿನ 2 ದಿನಗಳಲ್ಲಿ 70 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಬರಲಿದೆ ಎಂದು ಹೇಳಿದ್ರು. ತೆರಿಗೆ ಕಡಿತದ ಬಳಿಕ ಉಳಿದ ಮೊತ್ತ ನಿಮ್ಮ ಖಾತೆಗೆ ಸಂದಾಯವಾಗಲಿದೆ ಎಂದು ಹೇಳಿದರು. ನಾನೆಷ್ಟು ಖುಷಿಯಾಗಿದ್ದೆ ಅಂದರೆ ನನಗೆ ರಾತ್ರಿ ನಿದ್ದೆಯೇ ಬರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ರು.

ಅಶೋಕ್​​ ಮಧುಬಾನಿ ಅಂಧರ್​ಥಂಡಿ ಬ್ಲಾಕ್​​ನ ನನೌರ್​ ಚೌಕ್​ನಲ್ಲಿ ಕ್ಷೌರ ಅಂಗಡಿಯನ್ನು ಹೊಂದಿದ್ದಾರೆ. ಅನೇಕ ವರ್ಷಗಳಿಂದ ಅಶೋಕ್​​ ಡ್ರೀಂ ಟೀಮ್​ನಲ್ಲಿ ಆಡುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಜಾಕ್​ಪಾಟ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...