ಕಷ್ಟಪಟ್ಟು ಸಂಪಾದಿಸಿದ ನಿಮ್ಮ ದುಡ್ಡನ್ನು ಬೆಳೆಸುವ ಆಲೋಚನೆ ನಿಮ್ಮದಾಗಿರುವುದು ಅತ್ಯಂತ ನಿರೀಕ್ಷಿತ. ಅಂಚೆ ಕಚೇರಿಯ ಉಳಿತಾಯ ಖಾತೆಗಳ ಮೂಲಕ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೇ ವಿತ್ತೀಯ ವರ್ಷವೊಂದರಲ್ಲಿ 3,500 ರೂ.ಗಳವರೆಗೂ ತೆರಿಗೆ ಉಳಿಸುವ ಆಯ್ಕೆಯೂ ಸಿಗುತ್ತದೆ. ಜಂಟಿ ಖಾತೆಯಾದರೆ ಈ ವಿನಾಯಿತಿ 7,000 ರೂ. ಗಳವರೆಗೂ ಇರಲಿದೆ.
ಇತ್ತೀಚಿನ ದಿನಗಳಲ್ಲಿ ಬಡ್ಡಿ ದರದಲ್ಲಿ ಸಾಕಷ್ಟು ಇಳಿಕೆಯಾಗಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಕೊಡುವ ವಾರ್ಷಿಕ ಬಡ್ಡಿದರ 2.7%ಗೆ ಇಳಿದಿದೆ. ಇದೇ ವೇಳೆ ಅಂಚೆ ಕಚೇರಿಯಲ್ಲಿ 4%ನಷ್ಟು ರಿಟರ್ನ್ಸ್ ನಿರೀಕ್ಷೆ ಮಾಡಬಹುದಾಗಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು
ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ನೀವು ಸೂಕ್ತ ದಾಖಲೆಗಳೊಂದಿಗೆ 500 ರೂಪಾಯಿಗಳ ಆರಂಭಿಕ ಠೇವಣಿಯೊಂದಿಗೆ ಆರಂಭಿಸಬಹುದಾಗಿದೆ. ಪ್ರತಿ ತಿಂಗಳ 10ನೇ ತಾರೀಖಿನಿಂದ ತಿಂಗಳ ಕೊನೆಯವರೆಗಿನ ಅವಧಿಯಲ್ಲಿ ಖಾತೆಯಲ್ಲಿರುವ ಕನಿಷ್ಠ ಮಟ್ಟದ ಉಳಿತಾಯದ ಮೇಲೆ ಬಡ್ಡಿ ದರ ಲೆಕ್ಕಾಚಾರ ಮಾಡಲಾಗುತ್ತದೆ.
ವಿತ್ತೀಯ ವರ್ಷದ ಅಂತ್ಯಕ್ಕೆ 500 ರೂಪಾಯಿಯ ಕನಿಷ್ಠ ಬಾಕಿ ಕಾಪಾಡಿಕೊಳ್ಳದ ಗ್ರಾಹಕರಿಗೆ 100 ರೂ.ಗಳ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಉಳಿತಾಯ ಖಾತೆಯಲ್ಲಿರುವ ಬಾಕಿ ಶೂನ್ಯವಾದಲ್ಲಿ ಖಾತೆ ತನ್ನಿಂತಾನೇ ಮುಚ್ಚಲ್ಪಡುತ್ತದೆ.
ಬಹುತೇಕ ರಿಸ್ಕ್ ರಹಿತ ಹೂಡಿಕೆ ಆಯ್ಕೆಯಾದ ಅಂಚೆ ಕಚೇರಿಯಲ್ಲಿ ನೀಡುವ ಬಡ್ಡಿ ದರಗಳ ಮಟ್ಟವನ್ನು ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಮಾರುಕಟ್ಟೆ ಪರಿಸ್ಥಿತಿಗಳನ್ನು ಆಧರಿಸಿ ಪರಿಶೀಲನೆ ಮಾಡುತ್ತದೆ. ಜುಲೈ-ಸೆಪ್ಟೆಂಬರ್ ಅವಧಿಗೆ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.