alex Certify ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಎಂಪಿಎಲ್ ಸ್ಪೋರ್ಟ್ಸ್, ಭಾರತೀಯ ಪುರುಷರು, ಮಹಿಳೆಯರು ಮತ್ತು ಅಂಡರ್ 19 ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಯೋಜತ್ವ ಪಡೆದಿದೆ. ಎಂಪಿಎಲ್, ತನ್ನ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸಲು ಮಂಗಳವಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಆನ್ಲೈನ್ ಶಾಪಿಂಗ್ ಫ್ಲಾಟ್ಫಾರ್ಮ್ ಗಳಾದ ಅಮೆಜಾನ್, ಮಿಂತ್ರ ಮತ್ತು ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ಕ್ರಿಕೆಟ್ ತಂಡದ ಸರಕುಗಳನ್ನು, ದೇಶಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಸುಲಭವಾಗಿ ತಲಪಿಸುವುದು ಇದ್ರ ಗುರಿಯಾಗಿದೆ.

ಬೆಂಗಳೂರು ಮೂಲದ ಕಂಪನಿ ಇದ್ರ ಬಗ್ಗೆ ಮಾಹಿತಿ ನೀಡಿದೆ. ತಂಡದ ಅಧಿಕೃತ ಜರ್ಸಿ, ಲೈಫ್ಸ್ಟೈಲ್ ಉಡುಗೆಯ ಸಂಪೂರ್ಣ ಕಲೆಕ್ಷನ್ ನಿಮಗೆ ಸಿಗಲಿದೆ. ಇದ್ರ ಬೆಲೆ 999 ರೂಪಾಯಿಯಿಂದ ಶುರುವಾಗಲಿದೆ. ಯಾವ ಪ್ರದೇಶದಲ್ಲಿ ಈ ಇ-ಕಾಮರ್ಸ್ ಕಂಪನಿಗಳು ಕೆಲಸ ಮಾಡ್ತಿದೆಯೋ ಆ ಎಲ್ಲ ಜಾಗದಲ್ಲಿ ವಸ್ತುಗಳು ಸಿಗಲಿವೆ.

ಟೀಮ್ ಇಂಡಿಯಾ ವಸ್ತುಗಳು, ಭಾರತದಲ್ಲಿ ಅನೇಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕೃತವಾಗಿ ಲಭ್ಯವಿರುವುದು ಇದೇ ಮೊದಲು ಎಂದು ಎಮ್‌ಪಿಎಲ್ ಸ್ಪೋರ್ಟ್ಸ್ ಮುಖ್ಯಸ್ಥ ಶೋಭಿತ್ ಗುಪ್ತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...