alex Certify ಶುಭ ಸುದ್ದಿ: BPL ಕುಟುಂಬಗಳಿಗೆ 2500 ರೂ. ನಗದು, ಗಿಫ್ಟ್ ಹ್ಯಾಂಪರ್ಸ್ ವಿತರಣೆ -ಸಿಎಂ ಪಳನಿಸ್ವಾಮಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: BPL ಕುಟುಂಬಗಳಿಗೆ 2500 ರೂ. ನಗದು, ಗಿಫ್ಟ್ ಹ್ಯಾಂಪರ್ಸ್ ವಿತರಣೆ -ಸಿಎಂ ಪಳನಿಸ್ವಾಮಿ ಘೋಷಣೆ

ಸೇಲಂ: ಪೊಂಗಲ್ ಹಬ್ಬದ ಕೊಡುಗೆಯಾಗಿ ಬಿಪಿಎಲ್ ಕುಟುಂಬಗಳಿಗೆ ವಿಶೇಷ ಕೊಡುಗೆ ಘೋಷಣೆ ಮಾಡಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಉಡುಗೊರೆ ಘೋಷಿಸಿದ್ದಾರೆ.

ತಮಿಳುನಾಡಿನ 2.60 ಕೋಟಿ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಪೊಂಗಲ್ ಹಬ್ಬದ ಉಡುಗೊರೆಯಾಗಿ 2500 ರೂ. ನಗದು ಮತ್ತು ಗಿಫ್ಟ್ ಹ್ಯಾಂಪರ್ಸ್ ಘೋಷಿಸಲಾಗಿದೆ. ಎಐಎಡಿಎಂಕೆ ಆಡಳಿತದ ತಮಿಳುನಾಡು ಸರ್ಕಾರ ಜನವರಿ 4 ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಿಹಿ ತಯಾರಿಸುವ ಸಾಮಗ್ರಿ ಒಳಗೊಂಡ ಕಿಟ್ ವಿತರಿಸಲಿದೆ.

ಪೊಂಗಲ್ ಗೆ ಸಿಹಿ ತಯಾರಿಸುವ ಸಾಮಗ್ರಿ ಇರುವ ಗಿಫ್ಟ್ ಹ್ಯಾಂಪರ್ಸ್ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...