alex Certify ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್

ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ.

ರಿಯೋ 2016ರಲ್ಲಿ ಬರೀ 2 ಸೆಂಮೀನಿಂದ ಪದಕ ಕೈತಪ್ಪಿಸಿಕೊಂಡಿದ್ದ ಆಂಡ್ರೆಜ಼ಿಕ್, 2017ರಲ್ಲಿ ತೋಳಿನ ಗಾಯದಿಂದ ಬಳಲಿದ್ದಲ್ಲದೇ 2018ರಲ್ಲಿ ಮೂಳೆ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಇಷ್ಟೆಲ್ಲಾ ಆದ ಮೇಲೂ ಕ್ರೀಡಾಂಗಳಕ್ಕೆ ಛಲ ಬಿಡದೇ ಮರಳಿರುವ ಆಂಡ್ರೆಜ಼ಿಕ್ ಟೋಕ್ಯೋದಲ್ಲಿ ಪೋಡಿಯಂ ಫಿನಿಶಿಂಗ್ ಕಂಡಿದ್ದಾರೆ.

ಶಾಕಿಂಗ್​: ಆನ್​​​ಲೈನ್​ ಕ್ಲಾಸಿಗೆ ತೊಂದರೆಯಾಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು…..!

ಇದೀಗ ಪೋಲೆ ಮಿಲೋಜ಼ೆಕ್ ಹೆಸರಿನ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆಂದು ನಿಧಿ ಸಂಗ್ರಹಿಸಲು ತಮ್ಮ ಪದಕ ಹರಾಜಿಗಿಟ್ಟಿದ್ದರು. ಈ ಪದಕವನ್ನು ಹರಾಜಿನಲ್ಲಿ ಅತ್ಯಧಿಕ ಬಿಡ್ ಸಲ್ಲಿಸಿ 1.4 ಕೋಟಿ ರೂಪಾಯಿಯಷ್ಟು ದುಡ್ಡಿಗೆ ಖರೀದಿ ಮಾಡಿದ ಜ಼ಬ್ಕಾ ಸೂಪರ್‌ಮಾರ್ಕೆಟ್‌ ಸಂಸ್ಥೆ ತಾನೂ ಸಹ ಮಾನವೀಯತೆ ಮೆರೆದಿದೆ.

ಬಿಡ್‌ನಲ್ಲಿ ಖರೀದಿ ಮಾಡಿದ ಪದಕವನ್ನು ಆಂಡ್ರೆಜ಼ೆಕ್‌ಗೆ ಮರಳಿಸಿದ ಜ಼ಬ್ಕಾ, ಮಗುವಿನ ಶಸ್ತ್ರಚಿಕಿತ್ಸೆಗೆ ಅಷ್ಟೂ ದುಡ್ಡನ್ನು ವಿನಿಯೋಗಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...