ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ.
ರಿಯೋ 2016ರಲ್ಲಿ ಬರೀ 2 ಸೆಂಮೀನಿಂದ ಪದಕ ಕೈತಪ್ಪಿಸಿಕೊಂಡಿದ್ದ ಆಂಡ್ರೆಜ಼ಿಕ್, 2017ರಲ್ಲಿ ತೋಳಿನ ಗಾಯದಿಂದ ಬಳಲಿದ್ದಲ್ಲದೇ 2018ರಲ್ಲಿ ಮೂಳೆ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಇಷ್ಟೆಲ್ಲಾ ಆದ ಮೇಲೂ ಕ್ರೀಡಾಂಗಳಕ್ಕೆ ಛಲ ಬಿಡದೇ ಮರಳಿರುವ ಆಂಡ್ರೆಜ಼ಿಕ್ ಟೋಕ್ಯೋದಲ್ಲಿ ಪೋಡಿಯಂ ಫಿನಿಶಿಂಗ್ ಕಂಡಿದ್ದಾರೆ.
ಶಾಕಿಂಗ್: ಆನ್ಲೈನ್ ಕ್ಲಾಸಿಗೆ ತೊಂದರೆಯಾಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು…..!
ಇದೀಗ ಪೋಲೆ ಮಿಲೋಜ಼ೆಕ್ ಹೆಸರಿನ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆಂದು ನಿಧಿ ಸಂಗ್ರಹಿಸಲು ತಮ್ಮ ಪದಕ ಹರಾಜಿಗಿಟ್ಟಿದ್ದರು. ಈ ಪದಕವನ್ನು ಹರಾಜಿನಲ್ಲಿ ಅತ್ಯಧಿಕ ಬಿಡ್ ಸಲ್ಲಿಸಿ 1.4 ಕೋಟಿ ರೂಪಾಯಿಯಷ್ಟು ದುಡ್ಡಿಗೆ ಖರೀದಿ ಮಾಡಿದ ಜ಼ಬ್ಕಾ ಸೂಪರ್‌ಮಾರ್ಕೆಟ್ ಸಂಸ್ಥೆ ತಾನೂ ಸಹ ಮಾನವೀಯತೆ ಮೆರೆದಿದೆ.
ಬಿಡ್‌ನಲ್ಲಿ ಖರೀದಿ ಮಾಡಿದ ಪದಕವನ್ನು ಆಂಡ್ರೆಜ಼ೆಕ್‌ಗೆ ಮರಳಿಸಿದ ಜ಼ಬ್ಕಾ, ಮಗುವಿನ ಶಸ್ತ್ರಚಿಕಿತ್ಸೆಗೆ ಅಷ್ಟೂ ದುಡ್ಡನ್ನು ವಿನಿಯೋಗಿಸಿದೆ.